Cannes 2025: ಹಣೆಗೆ ಸಿಂಧೂರವಿಟ್ಟು ಲುಕ್‌ನಲ್ಲೇ ಪಾಕ್‌ಗೆ ದಿಟ್ಟ ಉತ್ತರಕೊಟ್ಟ ಕರಾವಳಿ ಬೆಡಗಿ ಐಶ್ವರ್ಯಾ ರೈ

Sampriya

ಗುರುವಾರ, 22 ಮೇ 2025 (15:54 IST)
Photo Credit X
2025 ರ ಕೇನ್ಸ್ ಚಲನಚಿತ್ರೋತ್ಸವದಲ್ಲಿ ಐಶ್ವರ್ಯಾ ರೈ ಬಚ್ಚನ್ ಅವರ ಲುಕ್‌ ಸಾಮಾಜಿಕ ಜಾಲತಾಣದಲ್ಲಿ ಭಾರೀ ಗಮನ ಸೆಳೆದಿದೆ. ಇದಕ್ಕೆ ಕಾರಣ ಮಾಜಿ ವಿಶ್ವ ಸುಂದರಿ ಹಣೆಗೆ ಹಚ್ಚಿಕೊಂಡಿರುವ ಸಿಂಧೂರಾ ಕಾರಣ.

ರೀಗಲ್ ಬಿಳಿ ಸೀರೆ ಮತ್ತು ದಪ್ಪ ಕೆಂಪು ಸಿಂಧೂರ್ ಧರಿಸಿ, ಅವರು ಕೇವಲ ಫ್ಯಾಶನ್ ಅನ್ನು ಮೀರಿ ಪ್ರಭಾವಶಾಲಿಯಾಘಿ ಕಂಡುಬಂದರು.

ಆಕೆಯ ಕೆಂಪು ಸಿಂಧೂರವು ಆಳವಾದ ಅರ್ಥವನ್ನು ಹೊಂದಿರಬಹುದು ಎಂದು ಅನೇಕ ಅಭಿಮಾನಿಗಳು ನಂಬಿದ್ದಾರೆ.

ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದಲ್ಲಿನ ಭಯೋತ್ಪಾದಕ ಜಾಲಗಳ ವಿರುದ್ಧ ಇತ್ತೀಚಿನ ಭಾರತೀಯ
ಸೇನಾ ಕಾರ್ಯಾಚರಣೆಯ ಆಪರೇಷನ್ ಸಿಂಧೂರ್‌ಗೆ ಇದು ಖಡಕ್ ಉತ್ತರ ಎಂದು ಬಳಕೆದಾರರು ಊಹಿಸಿದ್ದಾರೆ.

25 ಭಾರತೀಯ ನಾಗರಿಕರು ಮತ್ತು ಒಬ್ಬ ನೇಪಾಳಿ ಪ್ರಜೆಯ ಜೀವವನ್ನು ತೆಗೆದುಕೊಂಡ ಮಾರಣಾಂತಿಕ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಆಫರೇಷನ್ ಸಿಂಧೂರ್‌ ನೇರ ಪ್ರತೀಕಾರವಾಗಿತ್ತು.

ಇದೀಗ ಐಶ್ವರ್ಯಾ ಅವರ ಲುಕ್‌ ಕೆಲವು ಅಭಿಮಾನಿಗಳು ಸಿಂಧೂರವನ್ನು ಭಾರತೀಯ ಸಶಸ್ತ್ರ ಪಡೆಗಳ ಶೌರ್ಯಕ್ಕೆ ಸಾಂಕೇತಿಕ ಈ ಮೂಲಕ ಗೌರವ ನೀಡಿದರು ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ