ಕಾನ್ ಚಿತ್ರೋತ್ಸವದಲ್ಲಿ ಎದ್ದು ಕಾಣುವಂತೆ ಸಿಂಧೂರ ಧರಿಸಿ ಸೀರೆಯುಟ್ಟು ಮಿರಮಿಂಚಿದ ನಟಿ ಐಶ್ವರ್ಯಾ ರೈ

Sampriya

ಗುರುವಾರ, 22 ಮೇ 2025 (14:06 IST)
Photo Courtesy X
ಮುಂಬೈ: ಕಾನ್ ಅಂತರರಾಷ್ಟ್ರೀಯ ಚಿತ್ರೋತ್ಸವವು ಜಗತ್ತಿನ ಪ್ರಮುಖ ಚಿತ್ರೋತ್ಸವಗಳಲ್ಲಿ ಕೂಡ ಒಂದು. ಫ್ರಾನ್ಸ್‌ನಲ್ಲಿ ಪ್ರತಿ ವರ್ಷ ನಡೆಯುವ ಈ ಚಿತ್ರೋತ್ಸವಕ್ಕೆ ಪ್ರಪಂಚದ ಹಲವಾರು ಸಿನಿ ಪ್ರೇಮಿಗಳು ಪಾಲ್ಗೊಳ್ಳುತ್ತಾರೆ. ಈ ಉತ್ಸವದಲ್ಲಿ ನಾಯಕಿಯರ ಬೆಕ್ಕಿನ ನಡಿಗೆಯನ್ನ ನೋಡಲು ಜಗತ್ತು ಕಾದು ಕುಂತಿರುತ್ತೆ. ಅದಕ್ಕೆ ಕಾರಣ ನಾಯಕಿಯರು ಹಾಕಿಕೊಳ್ಳುವ ಉಡುಗೆ ತೊಡುಗೆ.

ಪ್ರತಿಷ್ಠಿತ ಕಾನ್ ಚಿತ್ರೋತ್ಸವದ ರೆಡ್ ಕಾರ್ಪೆಟ್‌ನಲ್ಲಿ ಈ ಸಾರಿಯೂ ಬಾಲಿವುಡ್‌ನ ಖ್ಯಾತ ನಟಿ ಐಶ್ವರ್ಯಾ ರೈ ಬಚ್ಚನ್ ಅವರು ಹೆಜ್ಜೆ ಹಾಕಿ ಮಿಂಚಿದ್ದಾರೆ. ಇಷ್ಟು ಸಾರಿ ಅವರು ತಮ್ಮ ಬಗೆ ಬಗೆಯ ದಿರಿಸುಗಳಿಂದ ಗಮನ ಸೆಳೆಯುತ್ತಿದ್ದ ನಟಿ ಈ ಸಾರಿ ಗಮನ ಸೆಳೆದಿದೆ.

ಬಾಲಿವುಡ್‌ ನಟಿ ಐಶ್ವರ್ಯಾ ಅವರು ಅತ್ಯಾಕರ್ಷಕ ಐವರಿ ಬಣ್ಣದ ಸೀರೆಯ ಜೊತೆ ಹಣೆಗೆ ಸಿಂಧೂರವನ್ನು ಧರಿಸಿದ್ದರು. ಅಷ್ಟೇ ಅಲ್ಲದೇ ಸಿಂಧೂರ ಎದ್ದು ಕಾಣುವ ಹಾಗೇ ಹೇರ್‌ಸ್ಟೈಲ್ ಕೂಡ ಮಾಡಿದನ್ನು ನೋಡಿ ಅಭಿಮಾನಿಗಳು ಫುಲ್‌ ಖುಷಿಯಾಗಿದ್ದಾರೆ.

ಭಾರತವು ಈಚೆಗೆ ಪಾಕಿಸ್ತಾನದ ಉಗ್ರರ ತಾಣಗಳ ಮೇಳೆ ಆಪರೇಷನ್ ಸಿಂಧೂರ ಎಂಬ ಸೇನಾ ಕಾರ್ಯಾಚರಣೆ ನಡೆಸಿತ್ತು. ಇದರ ಬೆಂಬಲವಾಗಿ ಐಶ್ವರ್ಯ ಅವರು ಸಿಂಧೂರ ಧರಿಸಿ ಕಾನ್‌ ಚಿತ್ರೋತ್ಸವದ ರೆಡ್ ಕಾರ್ಪೆಟ್‌ನಲ್ಲಿ ಹೆಜ್ಜೆ ಹಾಕಿದ್ದಾರೆ ಎನ್ನಲಾಗಿದೆ.

ಇತ್ತೀಚೆಗೆ ಐಶ್–ಅಭಿಷೇಕ್ ಬಚ್ಚನ್ ದಾಂಪತ್ಯದಲ್ಲಿ ಬಿರುಕು ಮೂಡಿತ್ತು ಎನ್ನಲಾಗಿತ್ತು. ಆದರೆ ಐಶ್ವರ್ಯಾ ಅವರು ಕಾನ್ ಚಿತ್ರೋತ್ಸವದ ಮೂಲಕ ಆ ಗಾಸಿಪ್‌ಗಳಿಗೂ ಉತ್ತರ ಕೊಟ್ಟಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ