‘ಸರ್ಕಾರ್' ಚಿತ್ರದ ವಿವಾದ; ರಜನಿಕಾಂತ್, ನಟ ಕಮಲ್ ಹಾಸನ್ ಹೇಳಿದ್ದೇನು?

ಮಂಗಳವಾರ, 13 ನವೆಂಬರ್ 2018 (06:58 IST)
ಚೆನ್ನೈ : ಕಾಲಿವುಡ್ ನಟ ವಿಜಯ್ ನಟಿಸಿರುವ ‘ಸರ್ಕಾರ್' ಚಿತ್ರಕ್ಕೆ ಎಐಎಡಿಎಂಕೆ ಪಕ್ಷ ವಿರೋಧ ವ್ಯಕ್ತಪಡಿಸಿದ್ದಕ್ಕೆ ಸೂಪರ್ ಸ್ಟಾರ್ ರಜನಿಕಾಂತ್, ನಟ ಕಮಲ್ ಹಾಸನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.


‘ಸರ್ಕಾರ್' ಸಿನಿಮಾದ ಕೆಲ ದೃಶ್ಯಗಳಲ್ಲಿ ಟಿವಿ, ಲ್ಯಾಪ್​ಟಾಪ್​ ಹಾಗೂ ಮಿಕ್ಸಿಗಳನ್ನು ಬೆಂಕಿಗೆ ಹಾಕುವ ದೃಶ್ಯವಿದ್ದು, ಇದಕ್ಕೆ ಎಐಎಡಿಎಂಕೆ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರು ವಿರೋಧಿಸಿ ಪ್ರತಿಭಟನೆ ನಡೆಸಿದ್ದರು. ಈ ಹಿನ್ನಲೆಯಲ್ಲಿ ಸರ್ಕಾರ್​ ಚಿತ್ರತಂಡ ಆ ದೃಶ್ಯಗಳಿಗೆ ಕತ್ತರಿ ಹಾಕುವುದಾಗಿ ಹೇಳಿವುದರ ಮೂಲಕ ಈ ವಿವಾದಕ್ಕೆ ತೆರೆ ಎಳೆದಿದೆ.


ಆದರೆ ಎಐಎಡಿಎಂಕೆ ಪಕ್ಷದ ಈ ನಡವಳಿಕೆಯ ಬಗ್ಗೆ ಬೇಸರ ವ್ಯಕ್ತಪಡಿಸಿದ ಖುಷ್ಬು ಸುಂದರ್, ಕಮಲ್ ಹಾಸನ್, ವಿಶಾಲ್, ರಜನಿಕಾಂತ್ ಟ್ವೀಟ್ ಮೂಲಕ ಎ.ಐ.ಎ.ಡಿ.ಎಂ.ಕೆ ಕಾರ್ಯಕರ್ತರ ಪ್ರತಿಭಟನೆ ಬಗ್ಗೆ ಖಂಡನೆ ವ್ಯಕ್ತಪಡಿಸಿದ್ದಾರೆ.


ನಟ ಕಮಲ್ ಹಾಸನ್ 'ಸತ್ಯವನ್ನು ಅರಗಿಸಿಕೊಳ್ಳಲು ಸರ್ಕಾರಕ್ಕೆ ಆಗುತ್ತಿಲ್ಲ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 'ಸೆನ್ಸಾರ್ ಬೋರ್ಡ್ ಅನುಮತಿ ನೀಡಿದ ಮೇಲೆ ಇನ್ನೇನು ಬಾಕಿ ಉಳಿದಿದೆ. ಒಂದು ವೇಳೆ ಆಕ್ಷೇಪಾರ್ಹ ದೃಶ್ಯಗಳು ಇದ್ದಿದ್ದರೆ, ಸೆನ್ಸಾರ್ ಬೋರ್ಡ್ ಖಂಡಿತವಾಗಿಯೂ ಆಕ್ಷೇಪ ವ್ಯಕ್ತಪಡಿಸುತ್ತಿತ್ತು. ಯಾರೊಬ್ಬರೂ ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗಬಾರದು. ಹಿಂಸಾಚಾರ ಮಾಡಬಾರದು' ಎಂದು ರಜನಿಕಾಂತ್ ಕಿಡಿಕಾರಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ