ಮಾಧುರಿ ದೀಕ್ಷಿತ್ ಗೆ ‘ಧಕ್ ಧಕ್’ ನೃತ್ಯ ಕಲಿಸಿಕೊಟ್ಟ ಕೊರಿಯಾಗ್ರಫರ್ ಸರೋಜ್ ಖಾನ್ ಇನ್ನಿಲ್ಲ

ಶುಕ್ರವಾರ, 3 ಜುಲೈ 2020 (10:04 IST)
ಮುಂಬೈ: ಬಾಲಿವುಡ್ ನ ಖ್ಯಾತ ಕೊರಿಯಾಗ್ರಫರ್ ಸರೋಜ್ ಖಾನ್ ನಿನ್ನೆ ರಾತ್ರಿ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.


ಅವರಿಗೆ 81 ವರ್ಷ ವಯಸ್ಸಾಗಿತ್ತು. ಅವರು ಉಸಿರಾಟದ ಸಮಸ್ಯೆಯಿಂದಾಗಿ ಇತ್ತೀಚೆಗಷ್ಟೇ ಮುಂಬೈನ ಗುರು ನಾನಕ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಮೊನ್ನೆಯಷ್ಟೇ ಅವರಿಗೆ ಕೊರೋನಾ ಪರೀಕ್ಷೆಯನ್ನೂ ನಡೆಸಲಾಗಿತ್ತು. ಆದರೆ ಅದು ನೆಗೆಟಿವ್ ವರದಿ ನೀಡಿತ್ತು.

ಮಾಧುರಿ ದೀಕ್ಷಿತ್ ಅವರ ‘ಧಕ್ ಧಕ್  ಕರ್‍ನೇ ಲಗಾ’ ಎಂಬ ಹಾಡು ಸೇರಿದಂತೆ ಅನೇಕ ಸೂಪರ್ ಹಿಟ್ ಹಾಡುಗಳಿಗೆ ನೃತ್ಯ ಸಂಯೋಜಿಸಿದ್ದ ಹೆಗ್ಗಳಿಕೆ ಸರೋಜ್ ಖಾನ್ ಅವರದ್ದಾಗಿತ್ತು. ಅವರ ನಿಧನಕ್ಕೆ ಬಾಲಿವುಡ್ ಸಂತಾಪ ಸೂಚಿಸಿದೆ. ಮುಂಬೈನಲ್ಲಿ ಇಂದು ಅವರ ಅಂತ್ಯಕ್ರಿಯೆ ನಡೆಯಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ