ಮದುವೆಯಾದ ಆರು ತಿಂಗಳಲ್ಲಿ ಅನುಷ್ಕಾ ಪತಿ ವಿರಾಟ್ ಕೊಹ್ಲಿ ಜತೆಗಿದ್ದಿದ್ದು 21 ದಿನ ಮಾತ್ರವಂತೆ!

ಶುಕ್ರವಾರ, 3 ಜುಲೈ 2020 (09:23 IST)
ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾರದ್ದು ಅನ್ಯೋನ್ಯ ದಾಂಪತ್ಯ. ಇಬ್ಬರೂ ಬಹಳಷ್ಟು ಕಾಲ ಡೇಟಿಂಗ್ ನಡೆಸಿ ನಂತರ ವೈವಾಹಿಕ ಬಂಧನಕ್ಕೊಳಗಾದವರು.


ಆದರೆ ಮದುವೆಯಾದ ಮೊದಲ ಆರು ತಿಂಗಳು ಇಬ್ಬರಿಗೂ ಪರಸ್ಪರ ಸಮಯ ಕಳೆಯಲು ಸಿಕ್ಕಿದ್ದು ಕೇವಲ 21 ದಿನ ಮಾತ್ರವಂತೆ! ಮೊದಲ ಆರು ತಿಂಗಳಲ್ಲಿ ನಾವು ಜತೆಯಾಗಿದ್ದಿದ್ದು ಎಂದರೆ ಕೇವಲ 21 ದಿನ ಮಾತ್ರ ಎಂದು ಅನುಷ್ಕಾ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ನಾನು ಸರಿಯಾಗಿ ಲೆಕ್ಕ ಹಾಕಿದ್ದೇನೆ. ನಾವಿಬ್ಬರೂ ಮೊದಲ ಆರು ತಿಂಗಳಲ್ಲಿ ಒಟ್ಟಿಗೆ ಇದ್ದಿದ್ದು 21 ದಿನ ಮಾತ್ರ. ಕೆಲವೊಮ್ಮೆ ನಮ್ಮ ಭೇಟಿ ಕೇವಲ ಒಂದು ಊಟಕ್ಕೆ ಮಾತ್ರ ಸೀಮಿತವಾಗಿರುತ್ತಿತ್ತು. ಒಬ್ಬರಲ್ಲಾ ಒಬ್ಬರು ಕೆಲಸ ಮಾಡುತ್ತಲೇ ಇದ್ದೆವು. ಹಾಗಿದ್ದರೂ ನಮ್ಮ ನಡುವೆ ಪ್ರೀತಿ ಇದೆ. ನಾವು ಎಷ್ಟೋ ವರ್ಷಗಳಿಂದ ಪರಿಚಯವಿದ್ದವರ ಹಾಗೆ ಅನ್ಯೋನ್ಯವಾಗಿದ್ದೇವೆ’ ಎಂದು ಅನುಷ್ಕಾ ಹೇಳಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ