ಬಾಲಿವುಡ್ ನಟ ಅಮೀರ್ ಖಾನ್ ಗೂ ಕೊರೋನಾ ಕಾಟ

ಬುಧವಾರ, 1 ಜುಲೈ 2020 (09:10 IST)
ಮುಂಬೈ: ಕೊರೋನಾ ಮಹಾಮಾರಿ ಯಾರನ್ನೂ ಬಿಡುವ ಹಾಗೆ ಕಾಣುತ್ತಿಲ್ಲ. ಇದೀಗ ಬಾಲಿವುಡ್ ನಟ ಅಮೀರ್ ಖಾನ್ ಕೂಡಾ ಕೊರೋನಾ ಭಯದಲ್ಲಿ ಕಾಲ ಕಳೆಯುತ್ತಿದ್ದಾರೆ.


ಇದಕ್ಕೆ ಕಾರಣ ಅವರ ನೌಕರರಲ್ಲಿ ಕೆಲವರಿಗೆ ಕೊರೋನಾ ದೃಢಪಟ್ಟಿದೆ. ಹೀಗಾಗಿ ಅಮೀರ್ ಕೂಡಾ ಪರೀಕ್ಷೆಗೊಳಗಾಗಿದ್ದು ಅವರ ವರದಿ ನೆಗೆಟಿವ್ ಬಂದಿದೆ.

ಆದರೆ ಅವರ ತಾಯಿಯವರ ಕೊರೋನಾ ಪರೀಕ್ಷೆ ಫಲಿತಾಂಶ ಇನ್ನೂ ಕೈ ಸೇರಿಲ್ಲ. ನನ್ನ ಅಮ್ಮನಿಗೂ ನೆಗೆಟಿವ್ ಫಲಿತಾಂಶ ಬರಲಿ ಎಂದು ಪ್ರಾರ್ಥಿಸಿ ಎಂದು ಸೋಷಿಯಲ್ ಮೀಡಿಯಾ ಮೂಲಕ ಮನವಿ ಮಾಡಿರುವ ಅಮೀರ್ ಸುರಕ್ಷತಾ ಕ್ರಮ ಕೈಗೊಂಡ ಮುಂಬೈ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಧನ್ಯವಾದ ಸಲ್ಲಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ