ತೆರೆ ಮೇಲೆ ಬರಲಿದೆ ಸಿಎಂ ಯೋಗಿ ಆದಿತ್ಯನಾಥ್‌ ಜೀವನಚರಿತ್ರೆ

Sampriya

ಗುರುವಾರ, 27 ಮಾರ್ಚ್ 2025 (17:28 IST)
Photo Courtesy X
ಮುಂಬೈ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಜೀವನ ಚರಿತ್ರೆಯನ್ನೊಳಗೊಂಡ ಸಿನಿಮಾವನ್ನು ಶೀಘ್ರದಲ್ಲೇ ತೆರೆ ಮೇಲೆ ಬರಲಿದೆ.

ಅಜೇಯ್: ದಿ ಅನ್‌ಟೋಲ್ಡ್ ಸ್ಟೋರಿ ಆಫ್ ಎ ಯೋಗಿ ಎಂಬ ಶೀರ್ಷಿಕೆಯ ಈ ಚಲನಚಿತ್ರವು ಶಾಂತನು ಗುಪ್ತಾ ಅವರು "ದಿ ಮಾಂಕ್ ಹೂ ಬಿಕಮ್ ಚೀಫ್ ಮಿನಿಸ್ಟರ್" ಪುಸ್ತಕದಿಂದ ಪ್ರೇರಿತವಾಗಿ ಈ ಸಿನಿಮಾವನ್ನು ನಿರ್ದೇಶಿಸಲು ಮುಂದಾಗಿದ್ದಾರೆ.

ಇದೀಗ ಸಿನಿಮಾ ಸಂಬಂಧ ತಯಾರಕರು ಗಮನಾರ್ಹವಾದ ಮೋಷನ್ ಪೋಸ್ಟರ್ ಅನ್ನು ಸಹ ಬಿಡುಗಡೆ ಮಾಡಿದ್ದಾರೆ.

ಮುಂಬರುವ ಚಿತ್ರದ ಹಿಂದಿನ ನಿರ್ಮಾಣ ಸಂಸ್ಥೆಯಾದ ಸಾಮ್ರಾಟ್ ಸಿನಿಮ್ಯಾಟಿಕ್ಸ್ ಈಗ ಅಜೇಯ್ ಅವರ ಮೊದಲ ನೋಟವನ್ನು ಬಹಿರಂಗಪಡಿಸಿದೆ. ಮೋಷನ್ ಪೋಸ್ಟರ್ ಯೋಗಿ ಆದಿತ್ಯನಾಥ್ ಅವರ ಅದ್ಭುತ ಪ್ರಯಾಣದ ಒಂದು ಸಣ್ಣ ನೋಟವನ್ನು ಈ ಸಿನಿಮಾ ನೀಡಲಿದೆ. ಈ ಸಿನಿಮಾದಲ್ಲಿನ ಪ್ರಮುಖ ಕ್ಷಣಗಳನ್ನು ಗುರುತಿಸುತ್ತದೆ.

ಯೋಗಿಯ ಆರಂಭಿಕ ದಿನಗಳಿಂದ ಹಿಡಿದು ರಾಜಕೀಯ ಎಂಟ್ರಿ ಹಾಗೂ ಆ ಮೇಲಿನ ಬೆಳವಣಿಗೆ ಬಗೆಗೆ ಈ ಸಿನಿಮಾದಲ್ಲಿ ಹೇಳಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ