ಶಾರುಖ್ ಖಾನ್ ಅಭಿನಯದ “ಡಿಯರ್ ಜಿಂದಗಿ” ಟೀಸರ್ ಬಿಡುಗಡೆ
ಮುಂಬೈ: ಬಾಲಿವುಡ್ ಬಾದ್ ಶಹಾ ಶಾರುಖ್ ಖಾನ್ ಮತ್ತು ಆಲಿಯಾ ಭಟ್ ಅಭಿನಯದ “ಡಿಯರ್ ಜಿಂದಗಿ” ಚಿತ್ರದ ಮೊದಲ ಟೀಸರ್ ಬಿಡುಗಡೆಯಾಗಿದೆ.
ಕುತೂಹಲಕಾರಿ ಟೀಸರ್ ನಲ್ಲಿ ಶಾರುಖ್ ತಮ್ಮ ಸಹನಟಿ ಆಲಿಯಾಗೆ ಸಮುದ್ರದ ಅಲೆಗಳೊಂದಿಗೆ ಕಬಡ್ಡಿ ಆಡುವುದು ಹೇಗೆಂದು ತೋರಿಸುವ ದೃಶ್ಯಗಳಿವೆ. ಈ ಟೀಸರ್ ಸಿನಿಮಾ ಬಗ್ಗೆ ಹೆಚ್ಚಿನ ಗುಟ್ಟು ಬಿಟ್ಟುಕೊಟ್ಟಿಲ್ಲ.
ನವಂಬರ್ 25 ರಂದು ಚಿತ್ರ ತೆರೆ ಕಾಣಲಿದೆ. ಆದಿತ್ಯ ರಾಯ್ ಕಪೂರ್, ಕುನಾಲ್ ಕಪೂರ್ ಮತ್ತು ಅಂಗದ್ ಬೇಡಿ ಮುಖ್ಯ ಭೂಮಿಕೆಯಲ್ಲಿದ್ದಾರೆ.