ಹಾಲಿವುಡ್ ರೆಡ್ ಕಾರ್ಪೆಟ್ ನಲ್ಲಿ ದೀಪಿಕಾ ಪಡುಕೋಣೆ ಉಡುಪಿಗೆ ಟೀಕೆ

ಮಂಗಳವಾರ, 8 ನವೆಂಬರ್ 2016 (13:24 IST)
ಮುಂಬೈ: ಇತ್ತೀಚೆಗೆ ರೋಟರ್ ಡ್ಯಾಂನಲ್ಲಿ ನಡೆದ ಎಂಟಿವಿ ಪ್ರಶಸ್ತಿ ಸಮಾರಂಭದಲ್ಲಿ ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ತೊಟ್ಟ ಉಡುಪು ಬ್ರಿಟಿಷ್ ಮಾಧ್ಯಮಗಳಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದೆ.

ದೀಪಿಕಾ ಉಡುಗೆ ಅಲ್ಲಿನ ಫ್ಯಾಶನ್ ವಿನ್ಯಾಸಕಾರರ ಮೆಚ್ಚುಗೆ ಗಳಿಸುವಲ್ಲಿ ವಿಫಲವಾಗಿದೆ.  ಇದು ಬಾಲಿವುಡ್ ನ ಬ್ಲಂಡರ್ ಎಂದು ಅಲ್ಲಿನ ಮಾಧ್ಯಮಗಳು ಬಣ್ಣಿಸಿವೆ. ಭಾರತೀಯ ನಟಿ ದೀಪಿಕಾ ಸುಂದರಿಯಾಗಿರಬಹುದು ಆದರೆ ಆಕೆಯ ಹಸಿರು ಕುಪ್ಪಸ ಮತ್ತು ಸ್ಕರ್ಟ್ ಆಕೆಗೆ ಹೊಂದಿಕೆಯೇ ಆಗಿಲ್ಲ ಎಂದು ಹೇಳಲಾಗಿದೆ.

ಇತ್ತೀಚೆಗಷ್ಟೇ ದೀಪಿಕಾ ಹಾಲಿವುಡ್ ಸಿನಿಮಾವೊಂದರಲ್ಲಿ ನಟಿಸಿದ್ದು, ತಮ್ಮ ಸಹನಟನೊಂದಿಗೆ ಹಾಲಿವುಡ್ ರೆಡ್ ಕಾರ್ಪೆಟ್ ನಲ್ಲಿ ಹೆಜ್ಜೆ ಹಾಕಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ