ದೀಪಿಕಾ ಜಾಗಕ್ಕೆ ಬಂದ್ರಾ ಕತ್ರೀನಾ ಕೈಫ್

ಶುಕ್ರವಾರ, 6 ಮೇ 2016 (10:54 IST)
ದೀಪಿಕಾ ಪಡುಕೋಣೆ ಅವರು ಸಲ್ಮಾನ್ ಖಾನ್ ಅವರೊಂದಿಗೆ ಅಭಿನಯಿಸುತ್ತಾರೆ ಅನ್ನೋ ವಿಚಾರ ಮೊನ್ನೆ ಮೊನ್ನೆ ತಾನೇ ಬಾಲಿವುಡ್ ಅಂಗಳದಲ್ಲಿ ಹರಿದಾಡಿದಾಗ ಅಭಿಮಾನಿಗಳು ಫುಲ್ ಖುಷಿಯಾಗಿದ್ದರು. ನಾವು ಬಹುದಿನಗಳಿಂದ ಆ ಜೋಡಿ ಕೊನೆಗೂ ತೆರೆ ಮೇಲೆ ಜೊತೆಯಾಗಿ ಕಾಣಿಸಿಕೊಳ್ಳುತ್ತಲ್ವಾ ಅಂತಾ ಲೆಕ್ಕಾಚಾರ ಹಾಕುತ್ತಿದ್ರು.ಆದ್ರೀಗ ಅದು ಸುಳ್ಳಾಗಿದೆ.
ಸಲ್ಮಾನ್ ಖಾನ್ ಅವರೊಂದಿಗೆ ದಿಪ್ಪಿ ಅಭಿನಯಿಸುತ್ತಿಲ್ಲ ಅನ್ನೋದನ್ನು ಕಬೀರ ಖಾನ್ ಅವರೇ ಮೊನ್ನೆ ಹೇಳಿದ್ದರು. ದೀಪಿಕಾ ಬೇರೆ ಸಿನಿಮಾದಲ್ಲಿ ಅಭಿನಯಿಸುತ್ತಿರೋದರಿಂದ ಡೇಟ್ ಸಮಸ್ಯೆಯಾಗಿ ಅವರು ಅಭಿನಯಿಸುತ್ತಿಲ್ಲ ಅಂತಾ ಅವರೇ ಹೇಳಿದ್ದರು.
 
ಅಂದ್ಹಾಗೆ ಸಲ್ಮಾನ್ ಖಾನ್ ಅಭಿನಯದ ಈ ಸಿನಿಮಾಕ್ಕೆ ಟ್ಯೂಬ್ ಲೈಟ್ ಅಂತಾ ಹೆಸರಿಡಲಾಗಿದೆ.ಇದೀಗ ದೀಪಿಕಾ ಪಡುಕೋಣೆ ಅವರು ಸಿನಿಮಾದಲ್ಲಿ ಅಭಿನಯಿಸದೇ ಇರೋದರಿಂದ ಅವರ ಜಾಗಕ್ಕೆ ಕತ್ರೀನಾ ಕೈಫ್ ಅವರನ್ನು ಆಯ್ಕೆ ಮಾಡಲಾಗಿದೆ ಅಂತಾ ಹೇಳಲಾಗುತ್ತಿದೆ.
 
ಇನ್ನು ಸಲ್ಮಾನ್ ಖಾನ್ ಹಾಗೂ ಕತ್ರೀನಾ ಕೈಫ್ ಪರಸ್ಪರ ದೂರವಾದ ಬಳಿಕ ಇದೀಗ ಮತ್ತೆ ಜತೆಯಾಗಿ ಅಭಿನಯಿಸುತ್ತಿದ್ದಾರೆ. ಹಾಗಾಗಿ ಸಲ್ಮಾನ್ ಖಾನ್ ಹಾಗೂ ಕತ್ರೀನಾ ಕೈಫ್ ಅವರನ್ನು ಮತ್ತೆ ತೆರೆ ಮೇಲೆ ನೋಡುವ ಕಾತುರದಲ್ಲಿದ್ದಾರೆ ಸಿನಿಮಾ ರಸಿಕರು.ಆದ್ರೆ ಕತ್ರೀನಾ ಮೇಡಮ್ ಇದಕ್ಕೆ ಏನ್ ಹೇಳ್ತಾರೆ ಕಾದುನೋಡ್ಬೇಕು.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ
 
 

ವೆಬ್ದುನಿಯಾವನ್ನು ಓದಿ