ಪಿ.ವಿ. ಸಿಂಧು ಬಯೋಪಿಕ್ ಗೆ ನಾಯಕಿಯಾಗ್ತಾರಾ ದೀಪಿಕಾ ಪಡುಕೋಣೆ?

ಗುರುವಾರ, 23 ಸೆಪ್ಟಂಬರ್ 2021 (09:20 IST)
ಮುಂಬೈ: ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ಹೋರಾಟದ ಹಾದಿ ಅನೇಕರಿಗೆ ಸ್ಪೂರ್ತಿ. ಒಂದು ವೇಳೆ ಸಿಂಧು ಜೀವನದ ಕುರಿತಾದ ಸಿನಿಮಾ ಹೊರಬಂದರೆ ಅದಕ್ಕೆ ನಾಯಕಿ ಯಾರಾಗಬಹುದು?


ಇತ್ತೀಚೆಗೆ ದೀಪಿಕಾ ಪಡುಕೋಣೆ ಮತ್ತು ಸಿಂಧು ಜೊತೆಯಾಗಿ ಸುತ್ತಾಡುತ್ತಿರುವುದು ಮತ್ತು ಮೊನ್ನೆ ಜೊತೆಯಾಗಿ ಬ್ಯಾಡ್ಮಿಂಟನ್ ಆಡಿರುವುದು ನೋಡಿದ ಮೇಲೆ ಅಭಿಮಾನಿಗಳು ಹಲವು ಪ್ರಶ್ನೆ ಮಾಡುತ್ತಿದ್ದಾರೆ.

ದೀಪಿಕಾ, ಬ್ಯಾಡ್ಮಿಂಟನ್ ತಾರೆ ಸಿಂಧು ಕುರಿತಾದ ಬಯೋಪಿಕ್ ಮಾಡಲಿದ್ದಾರೆಯೇ? ಈ ಸಿನಿಮಾದಲ್ಲಿ ಸಿಂಧು ಪಾತ್ರವನ್ನು ದೀಪಿಕಾ ಮಾಡಲಿದ್ದಾರೆಯೇ? ಅದಕ್ಕೇ ಈ ತಯಾರಿ ನಡೆಯುತ್ತಿದೆಯೇ ಎಂದು ನೆಟ್ಟಿಗರು ದೀಪಿಕಾ ಮತ್ತು ಸಿಂಧುಗೆ ಪ್ರಶ್ನೆ ಮಾಡುತ್ತಿದ್ದಾರೆ. ಇದಕ್ಕೆ ಸದ್ಯದಲ್ಲೇ ಉತ್ತರ ಸಿಗುವ ಸಾಧ‍್ಯತೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ