ಐಪಿಎಲ್ 14: ಆರೆಂಜ್ ಕ್ಯಾಪ್ ಉಳಿಸಿಕೊಂಡ ಶಿಖರ್ ಧವನ್

ಗುರುವಾರ, 23 ಸೆಪ್ಟಂಬರ್ 2021 (08:50 IST)
ದುಬೈ: ಐಪಿಎಲ್ ನಲ್ಲಿ ನಿನ್ನೆ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ 8 ವಿಕೆಟ್ ಗಳ ಭರ್ಜರಿ ಜಯ ಗಳಿಸಿದೆ. ಇದರೊಂದಿಗೆ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಮರಳಿ ಪಡೆದುಕೊಂಡಿದೆ.


ನಿನ್ನೆ ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 134 ರನ್ ಗಳಿಸಿತು. ಈ ಸುಲಭ ಮೊತ್ತ ಬೆನ್ನತ್ತಿದ ಡೆಲ್ಲಿ 17.5 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 139 ರನ್ ಗಳಿಸಿ ಗೆಲುವು ಪಡೆಯಿತು.

ಆರಂಭಿಕ ಶಿಖರ್ ಧವನ್ 42 ರನ್ ಗಳಿಸಿ ಔಟಾದರು. ಇದರೊಂದಿಗೆ ಐಪಿಎಲ್ 14 ರಲ್ಲಿ ಗರಿಷ್ಠ ರನ್ ಸರದಾರನಾಗಿ ಆರೆಂಜ್ ಕ್ಯಾಪ್ ಉಳಿಸಿಕೊಂಡರು. ಮಧ್ಯಮ ಕ್ರಮಾಂಕದಲ್ಲಿ ಬಹಳ ದಿನಗಳ ನಂತರ ಕ್ರೀಸ್ ಗಿಳಿದ ಶ್ರೇಯಸ್ ಐಯರ್ ಅಜೇಯ 47, ನಾಯಕ ರಿಷಬ್ ಪಂತ್ ಅಜೇಯ 32 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ