ತಿಂಗಳಲ್ಲೇ ಮುರಿದುಬಿತ್ತಾ ಶಮಿತಾ ಶೆಟ್ಟಿ ಲವ್ ಸ್ಟೋರಿ?!
ಬಿಗ್ ಬಾಸ್ ಒಟಿಟಿ ವೇದಿಕೆಯಲ್ಲಿ ಸಹಸ್ಪರ್ಧಿಗಳಾಗಿದ್ದ ಶಮಿತಾ ಮತ್ತು ರಾಕೇಶ್ ಬಾಪಟ್ ಕೆಲವು ದಿನಗಳಿಂದ ಡೇಟಿಂಗ್ ನಲ್ಲಿದ್ದರು. ಇಬ್ಬರೂ ಇನ್ನೇನು ಮದುವೆಯಾಗಲಿದ್ದಾರೆ ಎಂಬ ಸುದ್ದಿಯೂ ಹರಿದಾಡುತ್ತಿತ್ತು.
ಆದರೆ ಈಗ ಈ ಜೋಡಿ ಬ್ರೇಕ್ ಅಪ್ ಆಗಿದೆ ಎಂಬ ಸುದ್ದಿ ಬರುತ್ತಿದೆ. ಸದ್ಯಕ್ಕೆ ಇಬ್ಬರೂ ಜೊತೆಯಾಗಿ ಕಾಣಿಸಿಕೊಳ್ಳುತ್ತಿರುವುದು ತಾವಿಬ್ಬರೂ ಜೊತೆಯಾಗಿ ಮಾಡಿರುವ ಮ್ಯೂಸಿಕ್ ಆಲ್ಬಂ ಕಾರಣಕ್ಕಾಗಿ ಮಾತ್ರ ಎನ್ನಲಾಗುತ್ತಿದೆ.