ಶಿಲ್ಪಾ ಶೆಟ್ಟಿ ಹೆಸರಿಗೆ ಆಸ್ತಿ ವರ್ಗಾಯಿಸಿದ ರಾಜ್ ಕುಂದ್ರಾ
ಜೈಲಿನಿಂದ ಹೊರಬಂದ ಮೇಲೆ ಕೆಲವು ದಿನಗಳ ಕಾಲ ಸಾರ್ವಜನಿಕ ಜೀವನದಿಂದ ದೂರವಿದ್ದ ರಾಜ್ ಕುಂದ್ರಾ ಇದೀಗ ಮತ್ತೆ ತಮ್ಮ ದೈನಂದಿನ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಮೊನ್ನೆಯಷ್ಟೇ ಬರ್ತ್ ಡೇ ಪಾರ್ಟಿಯೊಂದರಲ್ಲಿ ಪತ್ನಿ ಶಿಲ್ಪಾ ಶೆಟ್ಟಿ ಕುಟುಂಬದವರೊಂದಿಗೆ ಪಾಲ್ಗೊಂಡಿದ್ದ ವಿಡಿಯೋ ವೈರಲ್ ಆಗಿತ್ತು.
ಇದೀಗ ರಾಜ್, ತಮ್ಮ ಪತ್ನಿ ಶಿಲ್ಪಾ ಶೆಟ್ಟಿಗೆ ಬರೋಬ್ಬರಿ 38.5 ಕೋಟಿ ರೂ. ಮೌಲ್ಯದ ಐದು ಫ್ಲ್ಯಾಟ್ ಗಳನ್ನು ಗಿಫ್ಟ್ ಆಗಿ ನೀಡಿ ಸುದ್ದಿಯಾಗಿದ್ದಾರೆ. ಜುಹುವಿನಲ್ಲಿರುವ ಅಪಾರ್ಟ್ ಮೆಂಟ್ ಒಂದರ ಐದು ಫ್ಲ್ಯಾಟ್ ಗಳನ್ನು ಶಿಲ್ಪಾ ಶೆಟ್ಟಿ ಹೆಸರಿಗೆ ವರ್ಗಾಯಿಸಿದ್ದಾರಂತೆ. ಈ ಬಗ್ಗೆ ನೋಂದಣಿಯನ್ನೂ ಮಾಡಿಸಿಕೊಳ್ಳಲಾಗಿದೆ ಎಂದು ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ.