ಹಾಸ್ಯ ನಟ ಸುನೀಲ್ ಈಗ ಪಡೆಯುತ್ತಿರುವ ಸಂಭಾವನೆ ಕೇಳಿದ್ರೆ ಶಾಕ್ ಆಗ್ತೀರಾ
ಶುಕ್ರವಾರ, 31 ಆಗಸ್ಟ್ 2018 (15:23 IST)
ಹೈದರಾಬಾದ್ :ಟಾಲಿವುಡ್ ಹಾಸ್ಯ ನಟ ಸುನೀಲ್ ಇಷ್ಟುದಿನ ಚಿತ್ರ ರಂಗದಿಂದ ದೂರ ಇದ್ದು ಇದೀಗಮತ್ತೆ ಚಿತ್ರರಂಗಕ್ಕೆ ವಾಪಾಸಾಗಿದ್ದಾರೆ. ಜೊತೆ ತಮ್ಮ ಸಂಭಾವನೆಯನ್ನು ಕೂಡ ಹೆಚ್ಚಿಸಿಕೊಂಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಹೀರೊಗಳಷ್ಟೆ ಡಿಮ್ಯಾಂಡ್ ಹಾಸ್ಯನಟರಿಗೂ ಇದೆ. ತಮ್ಮ ಹಾಸ್ಯದಿಂದ ಜನರನ್ನು ರಂಜಿಸುವದರ ಮೂಲಕ ಅಪಾರವಾದ ಅಭಿಮಾನಿಗಳನ್ನು ಅವರು ಕೂಡ ಹೊಂದಿರುತ್ತಾರೆ. ಇತ್ತಿಚೆಗೆ ಲವ್ ಸ್ಟೋರಿ, ಆ್ಯಕ್ಷನ್ ಚಿತ್ರಗಳ ಜೊತೆಗೆ ಹಾಸ್ಯ ಸಿನಿಮಾಗಳಿಗೂ ಕೂಡ ಜನರಿಂದ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ.
ಹೀಗಿರುವಾಗ ಹಾಸ್ಯ ನಟ ಸುನೀಲ್ ಚಿತ್ರ ರಂಗದಿಂದ ದೂರ ಇದ್ದು, ತ್ರಿವಿಕ್ರಮ ನಿರ್ದೇಶನದ ಜೂ.ಎನ್ಟಿಆರ್ ನಟನೆಯ 'ಅರವಿಂದ್ ಸಮೀತ ವೀರ ರಾಘವ' ಚಿತ್ರದಲ್ಲಿ ನಟಿಸುವ ಮೂಲಕ ಮತ್ತೆ ಚಿತ್ರರಂಗಕ್ಕೆ ವಾಪಸ್ ಆಗಿದ್ದಾರೆ. ಜೊತೆಗೆ ತಮ್ಮ ಸಂಭಾವನೆಯನ್ನು ಕೂಡ ಹೆಚ್ಚಿಸಿದ್ದಾರಂತೆ. ಇದುವರೆಗೆ ಒಂದು ಚಿತ್ರಕ್ಕೆ ಕೋಟಿ ಲೆಕ್ಕದಲ್ಲಿ ಹಣ ಪಡೆಯುತ್ತಿದ್ದ ಅವರು, ಈಗ ಪ್ರತಿ ದಿನಕ್ಕೆ ಲಕ್ಷಾಂತರ ರೂಪಾಯಿ ಪಡೆಯುತ್ತಿದ್ದಾರಂತೆ. ಮೂಲಗಳ ಪ್ರಕಾರ ಸುನೀಲ್ ಒಂದು ದಿನಕ್ಕೆ 3.5 ಲಕ್ಷ ರೂ. ಸಂಭಾವನೆ ತೆಗೆದುಕೊಳ್ಳುತ್ತಿದ್ದಾರಂತೆ. ಇಷ್ಟು ದೊಡ್ಡ ಮೊತ್ತವನ್ನು ನೀಡಲು ನಿರ್ಮಾಪಕರುಗಳು ಕೂಡ ರೆಡಿಯಾಗಿದ್ದಾರಂತೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.