ಕುತೂಹಲ ಮೂಡಿಸಿದೆ 'ಉದ್ಘರ್ಷ' ಫಸ್ಟ್ ಲುಕ್

ಬುಧವಾರ, 29 ಆಗಸ್ಟ್ 2018 (14:33 IST)
ಎರಡು ವರ್ಷಗಳ ಬಳಿಕ ಮತ್ತೆ ಕಮ್ ಬ್ಯಾಕ್ ಮಾಡಿದ ಸಸ್ಪೆನ್ಸ್-ಥ್ರಿಲ್ಲರ್ ಚಿತ್ರ ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ ಇದೀಗ ಉದ್ಘರ್ಷ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ದೇಸಾಯಿ ನಿರ್ದೇಶನದ 'ಉದ್ಘರ್ಷ' ಸಿನಿಮಾ ಪೋಸ್ಟರ್ ಇದೀಗ ಕುತೂಹಲ ಮೂಡಿಸಿದೆ..!!
ಈ ಚಿತ್ರದಲ್ಲಿ ಬಹುಭಾಷಾ ಸ್ಟಾರ್‌ಗಳು ನಟಿಸಿದ್ದಾರೆ. ಠಾಕೂರ್‌ ಅನೂಪ್‌ ಸಿಂಗ್‌, ಧನ್ಸಿಕಾ, ತಾನ್ಯ ಹೋಪ್‌, ಕಬೀರ್‌ ಸಿಂಗ್‌ ದುಹಾನ್‌, ಬಾಹುಬಲಿ ಖ್ಯಾತಿಯ ಪ್ರಭಾಕರ್‌, ಶ್ರದ್ಧಾ ದಾಸ್‌ ಹಾಗೂ ಅತಿಥಿ ಪಾತ್ರದಲ್ಲಿ ಹರ್ಷಿಕಾ ಪೂಣಚ್ಚ ಸೇರಿದಂತೆ ಇನ್ನೂ ಹಲವರೂ ನಟನಟಿಯರು ಉದ್ಘರ್ಷ ಚಿತ್ರದಲ್ಲಿದ್ದಾರೆ.
 
ಉದ್ಘರ್ಷ ಚಿತ್ರದ ಫಸ್ಟ್ ಲುಕ್ ನಲ್ಲಿ ರಕ್ತ ಸಿಕ್ತ ಹುಡುಗಿಯೊಬ್ಬಳ ಕಾಲುಗಳನ್ನು ತೋರಿಸಿ ಪೋಸ್ಟರ್ ನಲ್ಲೇ ಕುತೂಹಲ ಮೂಡಿಸಿದ್ದಾರೆ. ದೇವರಾಜ್ ಚಿತ್ರದ ನಿರ್ಮಾಣ ಮಾಡುತ್ತಿದ್ದು ಬಾಲಿವುಡ್ ಖ್ಯಾತ ಸಂಗೀತ ನಿರ್ದೇಶಕ ಸಂಜೋಯ್ ಚೌಧರಿ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ.
 
'ಉದ್ಘರ್ಷ' ಚಿತ್ರವನ್ನು ಏಕಕಾಲದಲ್ಲಿ ಕನ್ನಡ, ತೆಲಗು, ತಮಿಳಿನಲ್ಲಿ ರಿಲೀಸ್ ಮಾಡಲಿದ್ದಾರೆ. ಚಿತ್ರೀಕರಣ ಸಂಪೂರ್ಣವಾಗಿ ಮುಗಿದಿದ್ದು, ಸಾಹಸ ನಿರ್ದೇಶಕ ರವಿವರ್ಮ ಸಾಹಸ ದೃಶ್ಯಗಳನ್ನು ಸಂಯೋಜಿಸಿದ್ದಾರೆ. ಒಟ್ಟಾರೆ, ಬಾಕಿ ಇರುವ ಕೆಲಸಗಳನ್ನ ಮುಗಿಸಿ ಆದಷ್ಟೂ ಬೇಗ ತೆರೆಮೇಲೆ ಬರಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ