ಸಲ್ಮಾನ್ ಖಾನ್ ತೆಗೆದ ಈ ಫೋಟೋದಲ್ಲಿರುವವರು ಯಾರು ಗೊತ್ತಾ?

ಸೋಮವಾರ, 20 ಆಗಸ್ಟ್ 2018 (15:02 IST)
ಮುಂಬೈ : ಬಾಲಿವುಡ್ ನ ನಟ ಸಲ್ಮಾನ್ ಖಾನ್ ಅವರು ತೆಗೆದ ಫೋಟೋವೊಂದು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ತುಂಬಾನೇ ಸದ್ದು ಮಾಡುತ್ತಿದೆ.


ಹೌದು. ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ಭಾರತ್ ಸಿನಿಮಾದ ಸೆಟ್ ನಲ್ಲಿ ಸಹ ನಟ ಸುನೀಲ್ ಗ್ರೋವರ್ ಅವರ ಫೋಟೋವೊಂದನ್ನು  ತೆಗೆದಿದ್ದಾರೆ. ಆದರೆ ಈ ಫೋಟೋದಲ್ಲಿರುವ  ವಿಶೇಷವೆನೆಂದರೆ ಇದರಲ್ಲಿ ನಟ ಸುನೀಲ್ ಗ್ರೋವರ್ ಅವರು ನೋಡೋದಕ್ಕೆ ಶಾರುಕ್ ಖಾನ್ ಹಾಗೇ ಕಾಣುತ್ತಿದ್ದಾರೆ. ಪಕ್ಕ ನೋಡಿದಾಗ ಅದು ಶಾರುಕ್ ಖಾನ್ ಇರಬಹುದೇ ಎಂದು ಎಷ್ಟೋ ಮಂದಿ ಅಂದುಕೊಂಡಿದ್ದಾರೆ.


ಸುನೀಲ್ ಗ್ರೋವರ್ ಅವರ ಚಿತ್ರವನ್ನು ಸೆರೆ ಹಿಡೀತಿರೋ ತಮ್ಮದೇ ಫೋಟೋವನ್ನು ಸಲ್ಮಾನ್ ಇನ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿ, “ಒಂದು ಒಳ್ಳೆ ಫೋಟೋ ತೆಗಿಬೇಕು ಅಂದರೆ ತುಂಬಾನೇ ಗಮನ ಕೊಡಬೇಕಾಗುತ್ತೆ” ಎಂದು ಈ ಫೋಟೋಗೆ ಶೀರ್ಷಿಕೆ ಬರೆದಿದ್ದಾರೆ. ಫೋಟೋ ನೋಡಿದ ಸಲ್ಲು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ