ರಣ್ ಬೀರ್ ಕಪೂರ್ ಬಗ್ಗೆ ಕತ್ರಿನಾ ಕೈಫ್ ಹೇಳಿದ್ದೇನು ಗೊತ್ತಾ?

ಬುಧವಾರ, 29 ನವೆಂಬರ್ 2023 (13:49 IST)
ಒಂದು ಕಾಲದ ಬಾಲಿವುಡ್ ನ ಪ್ರಣಯ ಪಕ್ಷಿಗಳಾದ ರಣ್ ಬೀರ್ ಕಪೂರ್ ಹಾಗೂ ದೀಪಿಕಾ ಪಡುಕೋಣೆ ಪರಸ್ಪರ ದೂರವಾದ ಬಳಿಕ ಇದೀಗ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅಲ್ಲದೇ ಸಿನಿಮಾದ ಶೂಟಿಂಗ್ ವೇಳೆಯೂ ಅವರಿಬ್ಬರು ಚೆನ್ನಾಗಿಯೇ ಇದ್ದರು ಅನ್ನೋದು ಸುದ್ದಿಯಾಗಿತ್ತು. ಮತ್ತೊಂದು ಕಡೆ ಇದು ಕತ್ರೀನಾ ಕೈಫ್ ಅಸಮಾಧಾನಕ್ಕೂ ಕಾರಣವಾಗಿತ್ತು.
 
ಮತ್ತೊಂದೆಡೆ ಇತ್ತೀಚೆಗೆ ಬಾಲಿವುಡ್ ಜೋಡಿಗಳ ಬಗ್ಗೆ ಆನ್ ಲೈನ್ ನಲ್ಲಿ ಸಮೀಕ್ಷೆಯೊಂದನ್ನು ಮಾಡಲಾಗಿತ್ತು. ಅದರಲ್ಲಿ ರಣ್ ಬೀರ್ ಕಪೂರ್ ಹಾಗೂ ದೀಪಿಕಾ ಪಡುಕೋಣೆ ಭವಿಷ್ಯದಲ್ಲಿ ಬಾಲಿವುಡ್ ನ ಕಾಜೋಲ್ –ಶಾರುಖ್ ಜೋಡಿಯಾಗುತ್ತಾರೆ ಎಂಬ ಸುದ್ದಿ ಬಂದಿತ್ತು. ಇದಕ್ಕೆ ಪ್ರತಿಕ್ರಿಸಿರುವ ಕತ್ರೀನಾ ನಾನು ನಿರ್ದೇಶಕಿಯಲ್ಲ. ನಾನು ನಟ-ನಟಿಯರನ್ನು ಆ ರೀತಿ ನೋಡೋದಿಲ್ಲ. ಪ್ರತಿಯೊಬ್ಬರು ಪರಸ್ಪರ ಚೆನ್ನಾಗಿ ಕೆಲಸ ಮಾಡಬೇಕು ಎಂದಿದ್ದಾರೆ.
 
ಕತ್ರೀನಾ ಮಾತು ಇದೀಗ ಬಾಲಿವುಡ್ ಅಂಗಳದಲ್ಲಿ ಇದೀಗ ಚರ್ಚೆಗೆ ಕಾರಣವಾಗಿದೆ. ಆದ್ರೆ ಕತ್ರೀನಾ ಮಾತ್ರ ಯಾರು ಏನೇ ಹೇಳಲಿ ನಾನು ಮಾತ್ರ ಹೇಳಿದ್ದು ನೂರಕ್ಕೆ ನೂರು ನಿಜ ಎನ್ನುತ್ತಿದ್ದಾರಂತೆ. ಆದ್ರೆ ಕತ್ರೀನಾ ಮಾತಿನ ಒಳಾರ್ಥ ಮಾತ್ರ ಇನ್ನೂ ನಿಗೂಢವಾಗಿಯೇ ಇದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ