ರಣಬೀರ್ ಕಪೂರ್ ಗೆ ಕನ್ನಡ ಕಲಿಸಿದ ರಶ್ಮಿಕಾ ಮಂದಣ್ಣ: ಮುಂದೇನಾಯ್ತು ನೀವೇ ನೋಡಿ

ಗುರುವಾರ, 23 ನವೆಂಬರ್ 2023 (11:00 IST)
Photo Courtesy: Twitter
ಮುಂಬೈ: ಅನಿಮಲ್ ಸಿನಿಮಾ ಪ್ರಚಾರದ ಭರಾಟೆಯಲ್ಲಿರುವ ನಾಯಕ ನಟ ರಣಬೀರ್ ಕಪೂರ್ ಮತ್ತು ನಾಯಕಿ ರಶ್ಮಿಕಾ ಮಂದಣ್ಣ ಈಗ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಇತ್ತೀಚೆಗೆ ಅನಿಮಲ್ ಪ್ರಮೋಷನ್ ಕಾರ್ಯಕ್ರಮದಲ್ಲಿ ಭಾಗಿಯಾದ ರಣಬೀರ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ ಕನ್ನಡ ಮಾತನಾಡಿರುವ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಕ್ಯಾಮರಾ ಮ್ಯಾನ್ ಒಬ್ಬರು ಕರ್ನಾಟಕದ ಹುಬ್ಬಳ್ಳಿಯವರಾಗಿದ್ದರು. ಹೀಗಾಗಿ ರಶ್ಮಿಕಾರನ್ನು ಕನ್ನಡದಲ್ಲೇ ಮಾತನಾಡಿಸಿದ್ದಲ್ಲೆ, ರಣಬೀರ್ ಗೂ ಕನ್ನಡ ಕಲಿಸಲು ಹೇಳಿದರು. ಅದರಂತೆ ರಣಬೀರ್ ಗೆ ರಶ್ಮಿಕಾ ಕನ್ನಡದಲ್ಲಿ ‘ನಮಸ್ಕಾರ, ಹೇಗಿದ್ದೀರಾ?’ ಎಂದು ಹೇಳಲು ಹೇಳಿಕೊಡುತ್ತಾರೆ. ರಣಬೀರ್ ರಶ್ಮಿಕಾಗೂ ಹೇಳುವಂತೆ ಹೇಳುತ್ತಾರೆ. ಆಗ ಕ್ಯಾಮರಾ ಮ್ಯಾನ್ ಚಾ ಕುಡಿದ್ರಾ ಎಂದು ಹೇಳಲು ಹೇಳಿಕೊಡುತ್ತಾರೆ. ಚಾ ಎಂದರೇನು ಎಂದು ರಣಬೀರ್ ಪದದ ಅರ್ಥ ಕೇಳಿ ಅಲ್ಲಿಂದ ತೆರಳುತ್ತಾರೆ.

ರಶ್ಮಿಕಾಗೆ ಚಾ ಕುಡುದ್ರಾ ಎಂದು ಹುಬ್ಬಳ್ಳಿ ಕನ್ನಡದಲ್ಲಿ ಹೇಳಲು ಕಷ್ಟವಾಗುತ್ತದೆ. ಇದನ್ನೆಲ್ಲಾ ನೋಡಿ ನೆಟ್ಟಿಗರು ಮೊದಲು ರಶ್ಮಿಕಾಗೇ ಕನ್ನಡ ಕಲಿಸಬೇಕು. ಮತ್ತೆ ರಣಬೀರ್ ಗೆ ಹೇಗೆ ಹೇಳಿಕೊಡ್ತಾರೆ ಎಂದು ತಮಾಷೆ ಮಾಡಿದ್ದಾರೆ. ಅನಿಮಲ್ ಕರ್ನಾಟಕದಲ್ಲೂ ರಿಲೀಸ್ ಆಗ್ತಿದೆಯಲ್ಲಾ ಅದಕ್ಕೇ ಈ ನಾಟಕ ಎಂದು ಇನ್ನು ಕೆಲವರು ಟಾಂಗ್ ಕೊಟ್ಟಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ