ಶಿಲ್ಪಾ ಶೆಟ್ಟಿ ಹಾಗೇ ಫಿಗರ್ ನಿಮ್ಮದಾಗಬೇಕಾ? ಹಾಗಾದ್ರೆ ಇದನ್ನು ಬಳಸಿ
ಸೋಮವಾರ, 18 ಜೂನ್ 2018 (12:49 IST)
ಮುಂಬೈ : ಒಂದು ಮಗುವಿನ ತಾಯಿಯಾಗಿ ವಯಸ್ಸು 40 ದಾಟಿದ ಮೇಲೂ ಈಗಲೂ ಫಿಟ್ ಆ್ಯಂಡ್ ಹಾಟ್ ಆಗಿರುವ ನಟಿ ಎಂದರೆ ಅದು ಶಿಲ್ಪಾ ಶೆಟ್ಟಿ. ಇದೀಗ ಅವರು ತಮ್ಮ ಅಭಿಮಾನಿಗಳಿಗೆ ಸರ್ಪ್ರೈಸ್ ವೊಂದನ್ನು ಕೊಟ್ಟಿದ್ದಾರೆ.
ಹೌದು. ಬಾಲಿವುಡ್ ನ ಹಾಟ್ ಬೆಡಗಿ ಶಿಲ್ಪಾ ಶೆಟ್ಟಿ ಅವರು ಹೊಸ ಆ್ಯಪ್ ವೊಂದನ್ನು ಬಿಡುಗಡೆ ಮಾಡಿದ್ದಾರೆ. ಈ ಆ್ಯಪ್ ಹೆಸರು ಹೆಲ್ತ್ ಅಂಡ್ ವೆಲ್ನೆಸ್. ಶಿಲ್ಪಾ ಶೆಟ್ಟಿ ಪ್ರಕಾರ, ಈ ಆ್ಯಪ್ ಬಳಸೋರು ಆರೋಗ್ಯವಾಗಿಯೂ, ಫಿಟ್ ಆಗಿಯೂ ಇರಬಹುದಂತೆ. ಈ ಆ್ಯಪ್ನಲ್ಲಿ 200 ಗಂಟೆಗಳ ಫೂಟೇಜ್ ಹೊಂದಿದ್ದು, ಎಲ್ಲಾ ವಯಸ್ಸಿನವರಿಗೂ ಹೊಂದುವಂತೆ ಆ್ಯಪ್ ಡಿಸೈನ್ ಮಾಡಲಾಗಿದೆ. ಜಸ್ಟ್ 21 ದಿನಗಳಲ್ಲಿ ವೇಯ್ಟ್ ಲಾಸ್ ಆಗಲು ಯಾವ ರೀತಿಯ ಆಹಾರ ಸೇವಿಸಬೇಕು ಅನ್ನೋ ಮಾಹಿತಿಯೂ ಹೆಲ್ತ್ ಅಂಡ್ ವೆಲ್ನೆಸ್ ಆ್ಯಪ್ ನಲ್ಲಿ ಇರಲಿದೆಯಂತೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ