ಪ್ರಿಯಾಂಕ ಕೈಲಿದ್ದ ಈ ಬ್ಯಾಗ್ ಬೆಲೆ ಕಾರಿನ ಬೆಲೆಗಿಂತ ದುಬಾರಿಯಂತೆ!

ಶನಿವಾರ, 16 ಜೂನ್ 2018 (08:49 IST)
ಮುಂಬೈ : ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಅವರು ಇತ್ತೀಚೆಗೆ ಮದುವೆ ಸಮಾರಂಭಕ್ಕೆ ತೆಗೆದುಕೊಂಡು ಹೋದ ಹ್ಯಾಂಡ್ ಬ್ಯಾಂಗ್ ಈಗ ಬಾರೀ ಸುದ್ದಿಯಲ್ಲಿದೆ. ಕಾರಣ ಅದರ ಬೆಲೆಯಿಂದ 74ಸಾಮಾನ್ಯರು  ಒಂದು ಸಣ್ಣ ಕಾ1ರನ್ನೇ ಖರೀದಿಸಬಹುದಂತೆ.


ಹೌದು. ಇತ್ತೀಚೆಗೆ ನಟಿ ಪ್ರಿಯಾಂಕ ವಚೋಪ್ರಾ ಅವರು ಹಾಲಿವುಡ್ ನಟ, ಗಾಯಕ ನಿಕ್ ಜೋನಾಸ್ ಜತೆಗೆ ನ್ಯೂಜರ್ಸಿಯಲ್ಲಿನ ತನ್ನ ಸಹೋದರಿ ಮದುವೆ ಸಮಾರಂಭಕ್ಕೆ ಹಾಜರಾಗಿದ್ದರು. ಈ ಕಾರ್ಯಕ್ರಮದಲ್ಲಿ ಪ್ರಿಯಾಂಕಾ ಅವರು ಹಿಡಿದುಕೊಂಡಿದ್ದ ಹ್ಯಾಂಡ್‍ಬ್ಯಾಗ್ ನೋಡಲು  ತುಂಬಾ ಆಕರ್ಷಕವಾಗಿತ್ತು ಆದರೆ ಅದರ ಬೆಲೆ ಕೇಳಿದ್ರೆ ಮಾತ್ರ ತಲೆ ಸುತ್ತುವುದಂತು ಗ್ಯಾರಂಟಿ.
ಯಾಕೆಂದರೆ ಆ ಹ್ಯಾಂಡ್‍ಬ್ಯಾಗ್ ಬೆಲೆ 6,820 ಡಾಲರ್ ಅಂತೆ. ಭಾರತೀಯ ಕರೆನ್ಸಿಯಲ್ಲಿ ಸುಮಾರು 4.6 ಲಕ್ಷ ರೂ.ಗಳು. ಮಾರುಕಟ್ಟೆಯಲ್ಲಿ ಟಿಯಾಗೋ ಕಾರಿನ ಬೆಲೆ 3.56 ಲಕ್ಷ, ರೆನೊ ಕ್ವಿಡ್ ಬೆಲೆ 3.9 ಲಕ್ಷ. ಈ ಹಣದಲ್ಲಿ ಟಾಟಾ ಟಿಯಾಗೋ, ರೆನೊ ಕ್ವಿಡ್‍ನಂತಹ ಕಾರುಗಳನ್ನು ಖರೀಸಬಹುದು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ