ಬಾಲಿವುಡ್ ಚಿತ್ರಗಳಲ್ಲಿ ನಟಿಸುತ್ತೇನೆ, ಸಿಂಗರ್ ಆಗ್ತೇನೆ: ಡ್ವೇನ್ ಬ್ರಾವೊ

ಶನಿವಾರ, 21 ಮೇ 2016 (10:53 IST)
'ನಾನು ಬಾಲಿವುಡ್‌ನಲ್ಲಿ ಆ್ಯಕ್ಟ್ ಮಾಡುತ್ತೇನೆ, ಅಲ್ಲದೇ ಸಾಂಗ್ ಕೂಡ ಹಾಡುವ ಅವಕಾಶ ಪಡದೇ ಪಡೆಯುತ್ತೇನೆ' ಎಂದು ಗುಜುರಾತ್ ಲಯನ್ಸ್ ಮತ್ತು ವೆಸ್ಟ್ ಇಂಡೀಸ್ ತಂಡದ ಆಲ್‌ರೌಂಡರ್ ಡ್ವೇನ್ ಬ್ರಾವೊ ಆಸೆ ವ್ಯಕ್ತಪಡಿಸಿದ್ದಾರೆ. ಕೆಲ ದಿನಗಳ ದಿಂದೆ ಬಾಲಿವುಡ್ ಚಿತ್ರಗಳಲ್ಲಿ ನಟಿಸುತ್ತೇನೆ ಎಂದು ಹೇಳಿಕೆ ನೀಡಿದ್ದರು. 

 
ಅದಲ್ಲದೇ ಬ್ರಾವೊ ತಮಿಳು ಚಿತ್ರ  Ula as well ಚಿತ್ರದಲ್ಲಿ ನಟಿಸುವ ಅವಕಾಶ ದೊರತಿದೆ. ಈ ಬಗ್ಗೆ ಕೇಳಲಾದ ಪ್ರಶ್ನೆಗೆ 'ನಾನು ಬಾಲಿವುಡ್ ಅವಕಾಶಕ್ಕಾಗಿ ಕಾಯುತ್ತಿದ್ದೇನೆ. ಆದರೆ ಬಾಲಿವುಡ್‌ನಲ್ಲಿ ಅವಕಾಶ ಪಡೆದೇ ಪಡೆಯುತ್ತೇನೆ ' ಎಂದು ಹೇಳಿದರು.
 
'ಕ್ರಿಕೆಟ್‌ಗೆ ನನ್ನ ಮೊದಲ ಆದ್ಯತೆ... ಬಾಲಿವುಡ್ ಪ್ರವೇಶಿಸುವುಡು ನನ್ನ ಕನಸುಗಳಲ್ಲಿ  ಒಂದು.. ಹಿಂದಿ ಚಿತ್ರದಲ್ಲಿ ನಟಿಸುವ ಕೆಲ ಆಹ್ವಾನಗಳು ಬಂದಿವೆ.  ಅದಕ್ಕಾಗಿ ನಾನು ತಯಾರಿ ಕೂಡ ಮಾಡಿಕೊಂಡಿದ್ದೇನೆ ಎಂದು ಬ್ರಾವೊ ಈ ಹಿಂದೆ ಹೇಳಿಕೆ ನೀಡಿದ್ದರು. 
 
ಅದಲ್ಲದೇ ನಾನು ಶಾರೂಖ್ ಖಾನ್ ಸಲ್ಮಾನ್ ಖಾನ್ ಹಾಗೂ ದೀಪಿಕಾ ಪಡುಕೋಣೆಯವರ ನಾನು  ಬಹುದೊಡ್ಡ ಅಭಿಮಾನಿ ಎಂದು ಬ್ರಾವೊ ಹೇಳಿಕೆ ನೀಡಿದ್ದರು.. ಬ್ರಾವೊ ಚಾಂಪಿಯನ್ ಡ್ಯಾನ್ಸ್ ಈಗಾಗಲೇ ಖ್ಯಾತಿ ಗಳಿಸಿದೆ. ಭಾರತದಲ್ಲೂ ಡ್ವೇನ್ ಬ್ರಾವೊ ಅತಿ ದೊಡ್ಡ ಸಂಖ್ಯೆಯ ಅಭಿಮಾನಿಗಳ ಬಳಗವನ್ನು ಹೊಂದಿದ್ದಾರೆ.

ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ ಮತ್ತು ತಾಜಾ ಅಪ್‌ಡೇಟ್ಸ್ ಪಡೆಯುತ್ತಾ ಇರಿ

ವೆಬ್ದುನಿಯಾವನ್ನು ಓದಿ