ಬಾಲಿವುಡ್‌ಗೆ ಎಂಟ್ರಿ ನೀಡಲು ಕಾತುರದಲ್ಲಿದ್ದಾರೆ ವೆಸ್ಟ್ ಇಂಡೀಸ್ ಕ್ರಿಕೆಟಿಗ ಡ್ವೇಯ್ನ್ ಬ್ರಾವೋ,

ಗುರುವಾರ, 28 ಏಪ್ರಿಲ್ 2016 (19:30 IST)
ಯಾವತ್ತಾದರೂ ಒಂದು ದಿನ ಬಾಲಿವುಡ್‌ನಲ್ಲಿ ಎಂಟ್ರಿ ಪಡೆಯುವುದು ವೆಸ್ಟ್ ಇಂಡೀಸ್ ಕ್ರಿಕೆಟಿಗ ಡ್ವೇಯ್ನ್ ಬ್ರಾವೋ ಅವರ ಕನಸಂತೆ. ಹೀಗಂತ ಕ್ರಿಕೆಟಿಗ ಡ್ವೇಯ್ನ್ ಬ್ರಾವೋ ಹೇಳಿಕೊಂಡಿದ್ದಾರೆ. ಬಾಲಿವುಡ್‌ಗೆ ಎಂಟ್ರಿ ನೀಡುವುದು ನನ್ನ ಕನಸಾಗಿದೆ. ನನಸಾಗಿಸಬೇಕಾದರೆ ನಾನು ನನ್ನ ಪ್ರಯತ್ನ ಮಾಡುವೆ ಎಂದು ತಿಳಿಸಿದ್ದಾರೆ. 
ಇದೇ ವೇಳೆ ತಮ್ಮ ಫ್ಯಾನ್ಸ್‌ನ್ನು ಉದ್ದೇಶಿಸಿ ಈ ಮಾತನ್ನು ಹೇಳಿರೋ ಡ್ವೇಯ್ನ್ ಬ್ರಾವೋ, , ನೀವು ಯಾವತ್ತು ನಂಬಿಕೆ ಹಾಗೂ ಕನಸನ್ನು ಕಾಣುವುದನ್ನು ನಿಲ್ಲಿಸಬೇಡಿ ಎಂದು ತಿಳಿಸಿದ್ದಾರೆ.ಅವರು ಹೇಳುವ ಪ್ರಕಾರ, ಬಾಲಿವುಡ್‌ನಿಂದ ಅವರಿಗೆ ಕೆಲ ಆಫರ್‌ಗಳು ಬಂದಿವೆಯಂತೆ, ಆದರೆ ಅವರು ಕ್ರಿಕೆಟ್ ಕಡೆಗೆ ಹೆಚ್ಚು ಗಮನ ಕೇಂದ್ರಿಕರಿಸಿದ್ದಾರೆ. 
 
ಇದಲ್ಲದೇ ಡ್ವೇಯ್ನ್ ಬ್ರಾವೋ ಹಿಂದಿ ಸಿನಿಮಾಗಳನ್ನು ಹೆಚ್ಚಾಗಿ ವೀಕ್ಷಿಸುತ್ತಾರಂತೆ, ಅಲ್ಲದೇ ಕೆಲ ಹಿಂದಿ ಅಕ್ಷರಗಳು ಅವರಿಗೆ ಪರಿಚಿತವಾಗಿವೆ ಎಂದು ಹೇಳಿದ್ದಾರೆ.
 
ಇನ್ನೂ ಹಿಂದಿ ಚಿತ್ರರಂಗದಲ್ಲಿ ಯಾವ ನಟರನ್ನು ಹೆಚ್ಚಾಗಿ ಇಷ್ಟಪಡುತ್ತೀರಿ ಎಂದು ಕೇಳಲಾದ ಪ್ರಶ್ನೆಗೆ ಸಲ್ಮಾನ್ ಖಾನ್, ಶಾರೂಖ್ ಖಾನ್, ಹಾಗೂ ದೀಪಿಕಾ ಪಡುಕೋಣೆ ಎಂದು ಹೇಳಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ
 
 

ವೆಬ್ದುನಿಯಾವನ್ನು ಓದಿ