ಅಭಿಮಾನಿ ಜತೆಗೆ ಸಲ್ಮಾನ್ ಖಾನ್ ಅನುಚಿತ ವರ್ತನೆ, ಕೇಸ್ ದಾಖಲು

ಶುಕ್ರವಾರ, 26 ಏಪ್ರಿಲ್ 2019 (07:10 IST)
ಮುಂಬೈ: ಅಭಿಮಾನಿ ಜತೆಗೆ ಅನುಚಿತ ವರ್ತನೆ ಮಾಡಿದ್ದಕ್ಕೆ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ವಿರುದ್ಧ ಕೇಸ್ ದಾಖಲಾಗಿದೆ.


ಅಭಿಮಾನಿಯೊಬ್ಬ ಒಪ್ಪಿಗೆಯಿಲ್ಲದೇ ಹಿಂಬಾಲಿಸುತ್ತಾ ವಿಡಿಯೋ ಮಾಡಿದ್ದು ಸಲ್ಮಾನ್ ರನ್ನು ಸಿಟ್ಟಿಗೆಬ್ಬಿಸಿತ್ತು. ಇದೇ ಕಾರಣಕ್ಕೆ ಆತನ ಮೊಬೈಲ್ ಕಸಿದುಕೊಳ್ಳಲು ಯತ್ನಿಸಿದರು ಎಂದು ಆರೋಪಿಸಲಾಗಿದೆ.

ಅಲ್ಲದೆ ಸಲ್ಮಾನ್ ಖಾನ್ ಬಾಡಿಗಾರ್ಡ್ ಗಳೂ ತನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆಂದು ಅಭಿಮಾನಿ ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದಾನೆ. ತಾನು ಒಪ್ಪಿಗೆ ಪಡೆದರೂ ಸಲ್ಮಾನ್ ಈ ರೀತಿ ಮಾಡಿದ್ದಾರೆಂಬುದು ಅಭಿಮಾನಿಯ ದೂರಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ       

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ