ಮುಂಬೈ : ಬಾಲಿವುಡ್ ನ ಹಿರಿಯ ನಟ ಅನಿಲ್ ಕಪೂರ್ ಅವರ ಮಗಳು ನಟಿ ಸೋನಂ ಕಪೂರ್ ಅವರ ಮದುವೆಯ ಬಗ್ಗೆ ಹಲವು ರೂಮರ್ಸ್ ಗಳು ಕೇಳಿಬಂದಿದ್ದು, ಇದೀಗ ಅವರ ಮದುವೆ ಡೇಟ್ಸ್ ಪಿಕ್ಸ್ ಆಗಿರುವುದಾಗಿ ಕಪೂರ್ ಕುಟುಂಬದವರು ತಿಳಿಸಿದ್ದಾರೆ.
ನಟಿ ಸೋನಂ ಕಪೂರ್ ಅವರು ದೆಹಲಿ ಮೂಲದ ವ್ಯಾಪಾರಿ ಆನಂದ್ ಅಹುಜಾ ಅವರನ್ನು ಕೈ ಹಿಡಿಯಲಿದ್ದು, ಇವರ ಮದುವೆ ಸಮಾರಂಭವು ಮೇ 8ರಂದು ಮುಂಬೈನಲ್ಲಿ ನಡೆಲಿದೆ. ಈಗಾಗಲೇ ಎರಡು ಕುಟುಂಬದವರು ಮದುವೆಗೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಸೋನಂ ಮತ್ತು ಆನಂದ್ ಮದುವೆ ವಿಷಯ ತಿಳಿಸಲು ತುಂಬಾ ಖುಷಿಯಾಗುತ್ತಿದೆ. ಮೇ 8ರಂದು ಮುಂಬೈನಲ್ಲಿ ಮದುವೆ ನಡೆಯಲಿದೆ. ಇದು ಒಂದು ನಿಕಟ ಸಂಬಂಧವಾಗಿದ್ದು, ನಮ್ಮ ಕುಟುಂಬದ ಖಾಸಗಿತನವನ್ನು ಗೌರವಿಸಬೇಕು ಎಂದು ವಿನಂತಿಸುತ್ತೇವೆ. ನಿಮ್ಮ ಆರ್ಶೀವಾದಕ್ಕೆ ಧನ್ಯವಾದಗಳು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ