ಮುಂಬೈ : ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರ ಅವರು ತಮ್ಮ ಕೈಗೆ ಕರಿಮಣಿ ಮಂಗಳ ಸೂತ್ರ ಧರಿಸಿರುವುದರ ಕುರಿತುಸೋಶಿಯಲ್ ಮೀಡಿಯಾದಲ್ಲಿ ಬಾರೀ ಚರ್ಚೆಯಾಗಿದ್ದು, ಇದೀಗ ಸ್ವತಃ ನಟಿ ಪ್ರಿಯಾಂಕ ಅವರೇ ಇದನ್ನು ಧರಿಸಲು ಕಾರಣವೆನೆಂಬುದನ್ನು ತಿಳಿಸಿದ್ದಾರೆ.
ಪ್ರಿಯಾಂಕಾ ಛೋಪ್ರಾ ತಮ್ಮ ಕೈಗೆ ಕರಿಮಣಿ ಮಂಗಳ ಸೂತ್ರ ಧರಿಸಿರುವ ಹಾಗೆ ಕಾಣುವ ಫೋಟೋವೊಂದನ್ನು ಇನ್ ಸ್ಟಾಗ್ರಾಂ ನಲ್ಲಿ ಅಪ್ ಲೋಡ್ ಮಾಡಿದ್ದು, ಪ್ರಿಯಾಂಕಾ ಛೋಪ್ರಾ ಅವರು ಗುಟ್ಟಾಗಿ ಮದುವೆ ಆದ್ರಾ ಎಂಬ ಸಂದೇಹ ಹಲವರಲ್ಲಿ ಮೂಡಿತ್ತು. ಅದನ್ನು ಬಗೆಹರಿಸಿಕೊಳ್ಳಲು ಅನೇಕರು ಪ್ರಿಯಾಂಕ ಅವರಲ್ಲಿ ಈ ಬಗ್ಗೆ ಪ್ರಶ್ನಿಸಿದ್ದರು. ಇದಕ್ಕೆ ಪ್ರಿಯಾಂಕ ಅವರು ಮಾತ್ರ ಯಾವುದೇ ಉತ್ತರ ನೀಡಿರಲಿಲ್ಲ.
ಆದರೆ ಇದೀಗ ಪ್ರತಿಕ್ರಿಯಿಸಿದ ನಟಿ ಪ್ರಿಯಾಂಕ ಅವರು,’ ಕೆಟ್ಟ ದೃಷ್ಟಿ ಬೀಳದಂತೆ ಧರಿಸಿರುವ ಕರಿಮಣಿ ಸರ ಇದು. ನಾನು ಮದುವೆಯಾದರೆ ಖಂಡಿತ ತಿಳಿಸುತ್ತೇನೆ. ಇದರಲ್ಲಿ ರಹಸ್ಯವೇನು ಇಲ್ಲ' ಎಂದು ಹೇಳುವ ಮೂಲಕ ತಮ್ಮ ಮದುವೆ ವಿಚಾರಕ್ಕೆ ತೆರೆ ಎಳೆದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ