ಅಬ್ಬಾ! ಕೊನೆಗೂ ಮದುವೆಯಾಗುವ ನಿರ್ಧಾರ ಮಾಡಿದ್ದಾರಂತೆ ದೀಪಿಕಾ - ರಣ್ವೀರ್ ಜೋಡಿ!
ಸೋಮವಾರ, 2 ಏಪ್ರಿಲ್ 2018 (06:54 IST)
ಮುಂಬೈ : ಬಾಲಿವುಡ್ ನ ಕ್ಯೂಟ್ ಕಪಲ್ ದೀಪಿಕಾ ಪಡುಕೋಣೆ ಮತ್ತು ರಣ್ವೀರ್ ಸಿಂಗ್ ಇಬ್ಬರು ಯಾವಾಗ ಮದುವೆ ಸಿಹಿಸುದ್ದಿ ನೀಡುತ್ತಾರೆ ಎಂದು ಕುತೂಹಲದಿಂದ ಕಾಯುತ್ತಿರುವ ಅವರ ಅಭಿಮಾನಿಗಳಿಗೊಂದು ಸಂತಸದ ವಿಷಯವೆನೆಂದರೆ ಈ ಜೋಡಿ ಇದೇ ವರ್ಷ ಮದುವೆಯಾಗುವ ನಿರ್ಧಾರ ಮಾಡಿದ್ದಾರಂತೆ.
ಇತ್ತೀಚೆಗಷ್ಟೇ ನಟಿ ದೀಪಿಕಾ ಅವರು ತಮ್ಮ ಕುಟುಂಬದವರ ಜೊತೆ ಬೆಂಗಳೂರಿನಲ್ಲಿ ಮದುವೆ ಶಾಪಿಂಗ್ ಮಾಡುತ್ತಿದ್ದ ಸುದ್ದಿ ಎಲ್ಲಾ ಕಡೆ ಹರಿದಾಡುತ್ತಿದ್ದು ಆದರೆ ಇದೀಗ ದೀಪಿಕಾ ಪಡುಕೋಣೆ ಮತ್ತು ರಣ್ವೀರ್ ಸಿಂಗ್ ಇಬ್ಬರು ಮದುವೆ ಇದೇ ವರ್ಷ ಆಗಲಿದೆ ಅಂತಾ ಕುಟುಂಬ ಮೂಲಗಳು ತಿಳಿಸಿವೆ. ಆದ್ರೆ ಯಾವಾಗ, ಎಲ್ಲಿ, ಹೇಗೆ ಎಂಬುದರ ಬಗ್ಗೆ ಮಾಹಿತಿಗಳನ್ನು ಕುಟುಂಬಸ್ಥರು ನೀಡಿಲ್ಲ. ಸದ್ಯ ವರ್ಷಾಂತ್ಯದಲ್ಲಿ ಅಂದ್ರೆ ಸೆಪ್ಟಂಬರ್ ಅಥವಾ ಡಿಸೆಂಬರ್ ನಲ್ಲಿ ಕ್ಯೂಟ್ ಜೋಡಿಗಳು ಸಾಂಸಾರಿಕ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ಹೇಳಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ