ಯಶ್-ರಾಧಿಕಾ ನಿಶ್ಚಿತಾರ್ಥ..ವಿಮಾನದಲ್ಲಿ ಗೋವಾಗೆ ತೆರಳಲಿರುವ ಯಶ್

ಗುರುವಾರ, 11 ಆಗಸ್ಟ್ 2016 (14:11 IST)
ನಟ ಯಶ್ ಹಾಗೂ ರಾಧಿಕಾ ಪಂಡಿತ್ ನಿಶ್ಚಿತಾರ್ಥ ನಾಳೆ ನೆರವೇರಲಿದೆ. ಈ ಸಂಬಂಧ ಇವತ್ತು ಗೋವಾಗೆ ನಟ ಯಶ್ ಸೇರಿದಂತೆ ಕುಟುಂಬದವರು ಹಾಗೂ ಆಪ್ತ ಸ್ನೇಹಿತರು ವಿಮಾನದಲ್ಲಿ ತೆರಳಿದ್ದಾರೆ. ವಿಮಾನದಲ್ಲಿ ಸುಮಾರು 50 ಮಂಜಿ ಯಶ್, ಕುಟುಂಬಸ್ಥರು ಹಾಗೂ ಆಪ್ತರು ಪ್ರಯಾಣ ಬೆಳೆಸಲಿದ್ದಾರೆ. 

 
ಈ ವಿಮಾನದಲ್ಲಿ ಶಿವರಾಜ್ ಕುಮಾರ್ಸ, ರವಿಚಂದ್ರನ್, ಜಯಣ್ಣ, ಕೆ ಮಂಜು ಹಾಗೂ ಹರಿಕೃಷ್ಣ ಮುತಾಂದವರು ಭಾಗಿಯಾಗಲಿದ್ದಾರೆ.

ಅಲ್ಲದೇ ಯಶ್ ಅವರ ಆಪ್ತ ಸ್ನೇಹಿತರು, ಫ್ಯಾಮಿಲಿ ಸದಸ್ಯರು ನಿಶ್ಛಿತಾರ್ಥದಲ್ಲಿ ಭಾಗಿಯಾಗಲಿದ್ದಾರೆ. ನಾಳೆ 11 ಗಂಟೆಗೆ ಇಬ್ಬರ ನಿಶ್ಚಿತಾರ್ಥ ನೆರವೇರಲಿದೆ. 

ನಟ ಯಶ್ ಹಾಗೂ ರಾಧಿಕಾ ಪಂಡಿತ್ ನಂದಗೋಕುಲ ಧಾರಾವಾಹಿಯಲ್ಲಿ ಅಭಿನಯಿಸುವಾಗಲೇ ಪರಿಚಿತರು. ಅಂದಿನಿಂದಲೇ ಅವರಿಬ್ಬರ ನಡುವೆ ಸ್ನೇಹವಿತ್ತು. ಇದೇ ಜೋಡಿ ಮೊಗ್ಗಿನ ಮನಸ್ಸು ಸಿನಿಮಾದಲ್ಲಿ ಜೊತೆಯಾಗಿ ಅಭಿನಯಿ ಕನ್ನಡಿಗರನ್ನು ಮೋಡಿ ಮಾಡಿತ್ತು.ಅಲ್ಲಿಂದ ಬಳಿಕ ಯಶ್ ಹಾಗೂ ರಾದಿಕಾ ನಡುವೆ ಸಂಥಿಂಗ್ ಸಂಥಿಂಗ್ ನಡೆಯುತ್ತಿದೆ ಅನ್ನೋ ಮಾತುಗಳು ಕೇಳಿ ಬರುತ್ತಲೇ ಇದ್ದವು.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 
 

ವೆಬ್ದುನಿಯಾವನ್ನು ಓದಿ