ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 12 ರ ಇಂದಿನ ಸಂಚಿಕೆಯಲ್ಲಿ ಜೋಡೆತ್ತು ಜಾನ್ವಿ ಮತ್ತು ಅಶ್ವಿನಿ ನಡುವೆಯೇ ವಾಗ್ಯುದ್ಧವಾಗುವ ಪ್ರೋಮೋ ಹರಿಯಬಿಡಲಾಗಿದೆ. ಇದನ್ನು ನೋಡಿ ನೆಟ್ಟಿಗರು ಕಿಚ್ಚ ಸುದೀಪ್ ಹೇಳಿದ್ರೂಂತ ಇಬ್ಬರೂ ಡ್ರಾಮಾ ಮಾಡ್ತಿದ್ದಾರಾ ಎಂದು ಪ್ರಶ್ನಿಸಿದ್ದಾರೆ.
ಇದುವರೆಗೂ ಮನೆಯಲ್ಲಿ ಜಾನ್ವಿ ಸ್ವಂತಿಕೆ ಪ್ರದರ್ಶಿಸುತ್ತಿಲ್ಲ. ಕೇವಲ ಅಶ್ವಿನಿ ಗೌಡಗೆ ಪಿಆರ್ ರೀತಿ ಕೆಲಸ ಮಾಡುತ್ತಿದ್ದಾರೆ ಎಂದು ಸ್ವತಃ ಕಿಚ್ಚ ಸುದೀಪ್ ಅವರೇ ನೇರವಾಗಿ ಹೇಳಿದ್ದರು. ಮೊನ್ನೆಯ ಸಂಚಿಕೆಯಲ್ಲಿ ಹೀಗೆ ಹೇಳಿ ಜಾನ್ವಿ ಶೇಪ್ ಔಟ್ ಮಾಡಿದ್ದರು ಕಿಚ್ಚ.
ಇದರ ಪರಿಣಾಮವೋ ಏನೋ ಎಂಬಂತೆ ಈಗ ಜಾನ್ವಿ-ಅಶ್ವಿನಿ ಭಿನ್ನಾಭಿಪ್ರಾಯ ಹೊರಹಾಕಿದ್ದಾರೆ. ತಮ್ಮ ಪ್ರತಿಸ್ಪರ್ಧಿ ಯಾಕೆ ಮನೆಯಲ್ಲಿರಬಾರದು ಎಂದು ಹೇಳಿ ಎಂದು ಬಿಗ್ ಬಾಸ್ ಟಾಸ್ಕ್ ಕೊಟ್ಟಿರುತ್ತದೆ. ಇದಕ್ಕೆ ಜಾನ್ವಿ ಫ್ರೆಂಡ್ ಶಿಪ್ ನಿಂದ ನನಗೆ ಕಳಂಕ ಬರುತ್ತಿದೆ ಎಂದು ಅಶ್ವಿನಿ ಹೇಳುತ್ತಾರೆ. ಇದು ಜಾನ್ವಿಯನ್ನು ಕೆರಳಿಸುತ್ತದೆ. ನಿಮ್ಮ ಆಟ ನೀವು ಆಡಿ ನನ್ನ ಆಟ ನಾನು ಆಡ್ತೀನಿ. ಕೆಲವರು ರೇಸ್ ನಲ್ಲಿ ಫಾಸ್ಟ್ ಆಗಿ ಹೋಗಬಹುದು. ಹಾಗಂತ ಸ್ಲೋ ಆಗಿ ಹೋಗುವವರು ಗುರಿ ತಲುಪಬಾರದು ಅಂತೇನಿಲ್ಲ ಎಂದು ತಿರುಗೇಟು ಕೊಡುತ್ತಾರೆ.
ಇದು ಅಶ್ವಿನಿಯನ್ನು ಕೆರಳಿಸುತ್ತದೆ. ಹಾಗಿದ್ದರೆ ಇಷ್ಟು ದಿನ ನನ್ನನ್ನು ಮುಂದೆ ಬಿಟ್ಟು ನೀವು ತಮಾಷೆ ನೋಡ್ತಿದ್ದಿರಿ. ಇಂತಹ ಫ್ರೆಂಡ್ ಶಿಪ್ ನನಗೆ ಬೇಡ ಎನ್ನುತ್ತಾರೆ. ಇಬ್ಬರ ನಡುವಿನ ಕಿತ್ತಾಟಕ್ಕೆ ಮನೆಯವರು ಮೂಕ ಸಾಕ್ಷಿಗಳಾಗಿರುತ್ತಾರೆ.
ಆದರೆ ಇಬ್ಬರ ಕಿತ್ತಾಟ ನೋಡಿ ನೆಟ್ಟಿಗರು ಇದೆಲ್ಲಾ ಕ್ಯಾಮರಾ ಮುಂದೆ ಇವರು ಆಡುತ್ತಿರುವ ನಾಟಕ ಎಂದಿದ್ದಾರೆ. ಜಾನ್ವಿಯನ್ನು ಅಶ್ವಿನಿಯ ಬಾಲ ಎನ್ನುತ್ತಿದ್ದಾರೆ. ಇದನ್ನು ತಪ್ಪಿಸಲು ಈಗ ಜಗಳವಾಡುವ ನಾಟಕವಾಡುತ್ತಿದ್ದಾರೆ ಎಂದಿದ್ದಾರೆ.