ಕಾಂತಾರ ಚಾಪ್ಟರ್ 1 ರಲ್ಲಿ ಮಾಯಕಾರನಾಗಲು ಎಷ್ಟು ಕಷ್ಟಪಟ್ಟಿದ್ರು ರಿಷಬ್ ಶೆಟ್ಟಿ: Video
ಕಾಂತಾರ ಚಾಪ್ಟರ್ ನಲ್ಲಿ ರಿಷಬ್ ಶೆಟ್ಟಿ ನಾಯಕನ ಪಾತ್ರದ ಜೊತೆಗೆ ಮಾಯಕಾರ ಎಂಬ ಹೆಸರಿನ ವಯೋವೃದ್ಧನ ಪಾತ್ರವನ್ನೂ ಮಾಡಿದ್ದರು. ಎಷ್ಟೋ ಜನರಿಗೆ ಈಗಲೂ ಆ ಪಾತ್ರ ಮಾಡಿದ್ದು ರಿಷಬ್ ಶೆಟ್ಟಿಯೇ ಎಂಬುದು ಖಚಿತವಾಗಿ ಗೊತ್ತಿರಲಿಲ್ಲ.
ಆದರೆ ಈಗ ಹೊಂಬಾಳೆ ಫಿಲಂಸ್ ಇದನ್ನು ವಿಡಿಯೋ ಮೂಲಕ ಖಚಿತಪಡಿಸಿದೆ. ರಿಷಬ್ ಈ ಪಾತ್ರಕ್ಕೆ ತಯಾರಾಗುವ ವಿಡಿಯೋವೊಂದನ್ನು ಹೊಂಬಾಳೆ ಫಿಲಂಸ್ ಹಂಚಿಕೊಂಡಿದೆ. ಇದರಲ್ಲಿ ಅವರು ಇಂತಹದ್ದೊಂದು ಪಾತ್ರ ಮಾಡಲು ಎಷ್ಟು ಪರಿಶ್ರಮಪಟ್ಟಿದ್ದಾರೆ ಎಂಬುದು ಗೊತ್ತಾಗಿದೆ.
ಈ ಪಾತ್ರಕ್ಕಾಗಿ ರಿಷಬ್ ಬರೋಬ್ಬರಿ 6 ಗಂಟೆ ಕೂತು ಮೇಕಪ್ ಮಾಡಿಕೊಂಡಿದ್ದಾರೆ. ಮೇಕಪ್ ಮಾಡಿದ ಬಳಿಕ ಅವರು ರಿಷಬ್ ಶೆಟ್ಟಿ ಎಂದು ಗೊತ್ತೇ ಆಗದಂತೆ ಬದಲಾಗಿದ್ದಾರೆ. ಅವರ ಪರಿಶ್ರಮಕ್ಕೆ ನೆಟ್ಟಿಗರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.