ನಟ ನವಾಜುದ್ದೀನ್ ಸಿದ್ದೀಕಿ ವಿರುದ್ಧ ಮೀಟೂ ಆರೋಪ ಮಾಡಿದ ಮಾಜಿ ಮಿಸ್ ಇಂಡಿಯಾ

ಭಾನುವಾರ, 11 ನವೆಂಬರ್ 2018 (07:25 IST)
ಮುಂಬೈ : ಬಾಲಿವುಡ್ ನಟ ನವಾಜುದ್ದೀನ್ ಸಿದ್ದೀಕಿ ವಿರುದ್ಧ ಮಾಜಿ ಮಿಸ್ ಇಂಡಿಯಾ ಹಾಗೂ ನಟಿ ನಿಹಾರಿಕಾ ಸಿಂಗ್ ಮೀಟೂ ಆರೋಪ ಮಾಡಿದ್ದಾರೆ.


ಈ ಬಗ್ಗೆ ನಟಿ ನಿಹಾರಿಕಾ ಸಿಂಗ್ ತಮ್ಮ ಟ್ವೀಟರ್ ನಲ್ಲಿ ಬರೆದುಕೊಂಡಿದ್ದಾರೆ. 2009ರಲ್ಲಿ, ಮಿಸ್ ಲವ್ಲಿ ಎಂಬ ಕಿರುಚಿತ್ರದಲ್ಲಿ ನಟ ನವಾಜುದ್ದೀನ್ ಸಿದ್ದೀಕಿ ಜೊತೆ ನಟಿಸಿದ ವೇಳೆ ನಮ್ಮಿಬ್ಬರ ಪರಿಚಯವಾಗಿತ್ತು. ಒಂದು ದಿನ ನನ್ನ ಮನೆಗೆ ಬಂದ ನವಾಜುದ್ದೀನ್  ಮನೆಯ ಬಾಗಿಲಲ್ಲಿ ನನ್ನ ಗಟ್ಟಿಯಾಗಿ ತಬ್ಬಿಕೊಂಡರು. ನಾನು ಅವರನ್ನು ತಳ್ಳಲು ಯತ್ನಿಸಿದೆ. ಹಲವು ಹೊತ್ತಿನ ಕೊಸರಾಟದ ಬಳಿಕ ನಾನು ಆತನಿಂದ ದೂರವಾದೆ. ಈ ಸಂದರ್ಭ ಮಾತನಾಡಿದ ಅವರು, ಮಿಸ್ ಇಂಡಿಯಾರನ್ನು ನನ್ನ ಬಾಳಸಂಗಾತಿಯನ್ನಾಗಿಸುವುದು ನನ್ನ ಬದುಕಿನ ಅತ್ಯಂತ ದೊಡ್ಡ ಕನಸು ಎಂದಿದ್ದರು’ ಎಂದು ಹೇಳಿದ್ದಾರೆ.


ಅಷ್ಟೇ ಅಲ್ಲದೇ ನನ್ನ ಗೆಳೆಯರು ಹಾಗೂ ಸಹೋದರಿಯರು ನನ್ನ ಜೊತೆ ಇದ್ದಾಗ ನವಾಜುದ್ದೀನ್ ಸಿಕ್ಕಾಪಟ್ಟೆ ಇನ್ ಸೆಕ್ಯೂರ್ ಫೀಲ್ ಆಗುತ್ತಿದ್ದರು. ನನ್ನೊಂದಿಗೆ ಏಕಾಂತವಾಗಿ ಸಮಯ ಕಳೆಯಲು ಆತ ಬಯಸುತ್ತಿದ್ದ ಎಂಬುದು ನನಗೆ ತಿಳಿಯುತ್ತಿತ್ತು. ಎಂದು ನಟಿ ನಿಹಾರಿಕಾ ಸಿಂಗ್ ಆರೋಪಿಸಿದ್ದಾರೆ. ಅಲ್ಲದೇ ನವಾಜುದ್ದೀನ್ ಸಿದ್ದೀಕಿ ಹುಡುಗಿಯರ ಚಟವಿರುವುದಾಗಿ ಕೂಡ ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ