ಪ್ರತಿಯೊಬ್ಬ ನಟ ನಟಿಗೂ ತಾನು ತನ್ನ ವೃತ್ತಿ ಬದುಕಿನಲ್ಲಿ ಇಂತಹದ್ದೊಂದು ಪಾತ್ರ ಮಾಡಬೇಕು ಅನ್ನೋ ಆಸೆ ಇರುತ್ತೆ. ಅಂತಹ ಪಾತ್ರ ಯಾವಾಗ ಸಿಗುತ್ತೆ ಅಂತಾ ಪ್ರತಿ ನಟ ನಟಿಯರು ಕಾಯುತ್ತಲೇ ಇರುತ್ತಾರೆ. ಅದಕ್ಕೆ ಹಿರಿಯ ನಟ ಅನಂತನಾಗ್ ಅವರು ಕೂಡ ಹೊರತಾಗಿಲ್ಲ. ಇದೀಗ ಅಂತಹ ಪಾತ್ರ ತನಗೆ ಸಿಕ್ಕಿರೋದಕ್ಕೆ ಖುಷಿಯಾಗಿದ್ದೇನೆ ಅಂತಿದ್ದಾರೆ ಅನಂತ್ ನಾಗ್.