43ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿ ಪ್ರಿಯಾಂಕಾ ಚೋಪ್ರಾ, ಬೀಚ್‌ನಲ್ಲಿ ಪತಿ ಜತೆ ಬರ್ತಡೇ ಸೆಲೆಬ್ರೇಟ್‌

Sampriya

ಶುಕ್ರವಾರ, 18 ಜುಲೈ 2025 (16:46 IST)
Photo Credit X
ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಪ್ರಿಯಾಂಕಾ ಚೋಪ್ರಾ ಅವರು ಇಂದು 43ನೇ ವರ್ಷ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.  ಇದೀಗ ಸಾಮಾಜಿಕ ಜಾಲತಾಣದಲ್ಲಿ ನಿಕ್ ಜೋನಾಸ್ ಜತೆಗಿನ ಪ್ರಿಯಾಂಕ ಅವರ ರೋಮ್ಯಾಂಟಿಕ್ ವಿಡಿಯೋವೊಂದು ವೈರಲ್ ಆಗಿದೆ. 

ಬೀಚ್‌ವೊಂದರಲ್ಲಿ ನಿಕ್ ಹಾಗೂ ಪ್ರಿಯಾಂಕಾ ಸಮಯ ಕಳೆದಿದ್ದಾರೆ.  

ಮೇ ತಿಂಗಳಲ್ಲಿ, ಪ್ರಿಯಾಂಕಾ ಮತ್ತು ನಿಕ್ ತಮ್ಮ ಕುಟುಂಬ ಪ್ರವಾಸದ ಕೆಲವು ಚಿತ್ರಗಳು ಮತ್ತು ವೀಡಿಯೊಗಳನ್ನು
ಹಂಚಿಕೊಂಡಿದ್ದಾರೆ.

ಮೊದಲ ಸ್ನ್ಯಾಪ್‌ನಲ್ಲಿ ಪ್ರಿಯಾಂಕಾ ಮಾಲ್ಟಿಯೊಂದಿಗೆ ಆಟವಾಡುತ್ತಿರುವುದನ್ನು ತೋರಿಸುತ್ತದೆ, ಅದರ ನಂತರ ಚಿಕ್ಕ ಮಾಲ್ತಿ ತನ್ನ ತೊಡೆಯ ಮೇಲೆ ಕುಳಿತಿರುವಾಗ "ಹ್ಯಾಪಿ ಮದರ್ಸ್ ಡೇ" ಎಂದು ಬರೆಯುವ ಸಣ್ಣ ಸ್ಲೇಟ್ ಅನ್ನು ಹಿಡಿದಿರುವ ಚಿತ್ರ. 

ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಬೀಚ್‌ನಲ್ಲಿ ನಿಂತಿದ್ದ ನಿಕ್ ಜೋನಾಸ್‌ ವಥಗ ಓಡಿ ಬಂದು ಪತಿಯನ್ನು ಅಪ್ಪಿಕೊಂಡು ಕಿಸ್ ಮಾಡುತ್ತಾರೆ. ಮಗಳ ಜೊತೆ ಸಮಯ ಕಳೆಯುವುದು ಮತ್ತು ಸಮುದ್ರದಲ್ಲಿ ಡ್ರೈವ್ ಮಾಡಿರುವ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ