ಹಿಮೇಶ್ ಹಾಗೂ ಕೋಮಲ್ ದಂಪತಿಗಳಿಗೆ ಸ್ವಯಂ ಎಂಬ ಪುತ್ರನಿದ್ದಾನೆ. ಇನ್ನು ಕಳೆದ 10 ವರ್ಷಗಳಿಂದ ಹಿಮೇಶ್ ಟಿವಿ ನಟಿ ಸೋನಿಯಾ ಕಪೂರ್ ಜತೆ ವಾಸವಾಗಿದ್ದರು. ಜೀವನದಲ್ಲಿ ಪರಸ್ಪರ ಗೌರವ ಅತ್ಯಂತ ಮುಖ್ಯವಾದದ್ದು. ನಮ್ಮ ಸಂಬಂಧಕ್ಕೆ ಗೌರವ ನೀಡಿ ಕೋಮಲ್ ಹಾಗೂ ನಾನು ವಿಚ್ಛೇದನ ಪಡೆದು ದೂರಾಗುತ್ತಿದ್ದೇವೆ ಎಂದು ಹಿಮೇಶ್ ತಿಳಿಸಿದ್ದಾರೆ. ಅಲ್ಲದೇ ನನ್ನ ಮಗ ಸ್ವಯಂ ಹಾಗೂ ನನ್ನ ಕುಟುಂಬ ಸೋನಿಯಾ ಅವರನ್ನು ಇಷ್ಟಪಡುತ್ತದೆ ಕೋಮಲ್ ಹೇಳಿದರೆ, ಹಿಮೇಶ್ ಕುಟುಂಬ ನನಗೂ ಕುಟುಂಬವೇ ನಾನು ಅವರನ್ನು ಇಷ್ಟಪಡುತ್ತೇನೆ ಎಂದು ಸೋನಿಯಾ ಕಪುರ್ ತಿಳಿಸಿದ್ದಾರೆ.