ಸಾಹಸಸಿಂಹ ವಿಷ್ಣುವರ್ದನ್ ಸ್ಮಾರಕಕ್ಕಾಗಿ ಕಿಚ್ಚ ಸುದೀಪ್ ಜಾಗ ಖರೀದಿ

Krishnaveni K

ಮಂಗಳವಾರ, 19 ಆಗಸ್ಟ್ 2025 (09:30 IST)
ಬೆಂಗಳೂರು: ಸಾಹಸಸಿಂಹ ಡಾ ವಿಷ್ಣುವರ್ಧನ್ ಮೇಲೆ ತಮಗಿರುವ ಅಭಿಮಾನ, ಪ್ರೀತಿ ಕೇವಲ ಮಾತಿನದ್ದು ಮಾತ್ರವಲ್ಲ ಎಂದು ಕಿಚ್ಚ ಸುದೀಪ್ ತೋರಿಸಿಕೊಟ್ಟಿದ್ದಾರೆ. ವಿಷ್ಣುವರ್ಧನ್ ಸ್ಮಾರಕಕ್ಕಾಗಿ ಅರ್ಧ ಎಕರೆ ಜಾಗ ಖರೀದಿ ಮಾಡಿದ್ದಾರೆ.

ಅಭಿಮಾನ್ ಸ್ಟುಡಿಯೋದಲ್ಲಿದ್ದ ವಿಷ್ಣುವರ್ಧನ್ ಸಮಾಧಿಯನ್ನು ಇತ್ತೀಚೆಗೆ ಬಾಲಣ್ಣ ಕುಟುಂಬದವರು ಒಡೆದು ಹಾಕಿದ್ದರು. ಇದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಕಿಚ್ಚ ಸುದೀಪ್ ಕೂಡಾ ಬೇಡಿದ್ದು ಸಾಕು ನಾವು ಏನು ಬೇಕೋ ಅದನ್ನು ಮಾಡೋಣ ಎಂದಿದ್ದರು.

ಇದೀಗ ನುಡಿದಂತೆ ನಡೆದಿದ್ದಾರೆ. ಸಾಹಸಸಿಂಹ ವಿಷ್ಣುವರ್ಧನ್ ಸ್ಮಾರಕ ನಿರ್ಮಿಸಲು ತಾವೇ ಜಾಗ ಖರೀದಿ ಮಾಡಿದ್ದಾರೆ. ಈ ಬಗ್ಗೆ ವಿಷ್ಣುವರ್ಧನ್ ಅಪ್ಪಟ ಅಭಿಮಾನಿ ವೀರಕಪುತ್ರ ಶ್ರೀನಿವಾಸ್ ಮಾಹಿತಿ ನೀಡಿದ್ದಾರೆ. ಕೆಂಗೇರಿ ಬಳಿಯೇ ಯಜಮಾನರ ಸ್ಮಾರಕ ನಿರ್ಮಿಸಲು ಕಿಚ್ಚ ಸುದೀಪ್ ಅರ್ಧ ಎಕರೆ ಜಾಗ ಖರೀದಿ ಮಾಡಿದ್ದಾರೆ ಎಂದಿದ್ದಾರೆ.

ಸದ್ಯದಲ್ಲೇ ಇಲ್ಲಿ ಅತ್ಯಂತ ಎತ್ತರದ ಪ್ರತಿಮೆ, ಸ್ಮಾರಕ ನಿರ್ಮಿಸುತ್ತೇವೆ. ಕಿಚ್ಚ ಸುದೀಪ್ ಒಪ್ಪಿದರೆ ಅವರ ಹುಟ್ಟುವಾದ ಸೆಪ್ಟೆಂಬರ್ 2 ರಂದೇ ಸ್ಮಾರಕಕ್ಕೆ ಅಡಿಗಲ್ಲು ನಿರ್ಮಿಸಲಿದ್ದೇವೆ. ಸ್ಮಾರಕದ ಮಾದರಿ ಈಗಾಗಲೇ ತಯಾರಾಗುತ್ತಿದೆ ಎಂದಿದ್ದಾರೆ. ಇದು ಅಭಿಮಾನಿಗಳಿಗೆ ನಿಜಕ್ಕೂ ಸಿಹಿ ಸುದ್ದಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ