ನಾನು ಸಂಕೋಚ ಸ್ವಭಾವದ ಹುಡುಗ.. ರೋಮ್ಯಾನ್ಸ್ ದೃಶ್ಯಗಳಲ್ಲಿ ಟೈಮ್ ತೆಗೆದುಕೊಳ್ತೀನಿ: ಮಹೇಶ್ ಬಾಬು

ಶುಕ್ರವಾರ, 20 ಮೇ 2016 (14:13 IST)
ನಾನು ಸಂಕೋಚ ಸ್ವಭಾವದ ಹುಡುಗ.. ಆದ್ದರಿಂದ ರೋಮ್ಯಾನ್ಸ್ ದೃಶ್ಯಗಳಲ್ಲಿ ಟೈಮ್ ತೆಗೆದುಕೊಳ್ತೀನಿ ಎಂದು ಮಹೇಶ್ ಬಾಬು ತಿಳಿಸಿದ್ದಾರೆ. ಬ್ರಹ್ಮೋತ್ಸವಮ್ ಚಿತ್ರಗಳಲ್ಲಿ ಲೀಡ್ ರೋಲ್‌ನಲ್ಲಿ ಕಾಣಿಸಿಕೊಳ್ಳುತ್ತಿರುವ ಮಹೇಶ್ ಬಾಬು ತಮ್ಮ ಮುಂದಿನ ಚಿತ್ರದ ಪಾತ್ರದ ಬಗ್ಗೆ ಸಂಬಂಧಪಟ್ಟಂತೆ ಶೇರ್ ಮಾಡಿಕೊಂಡಿದ್ದಾರೆ.
ಸದ್ಯಕ್ಕಂತೂ ಮಹೇಶ್ ಬಾಬು ಯಾವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದರ ಬಗ್ಗೆ ಮಾಹಿತಿ ಇಲ್ಲ,.. ಪ್ರಿನ್ಸ್ ಮಹೇಶ್ ಬಾಬು ಅವರ ಬಿಗ್ ಬಜೆಟ್ ಚಿತ್ರ ಅಂತ ಹೇಳಲಾಗ್ತಿರೋ ಬ್ರಹ್ಮೋತ್ಸವ ಚಿತ್ರವು ಸಾಕಷ್ಟು ನಿರೀಕ್ಷೆ ಮೂಡಿಸಿದೆ. 
 
ಇನ್ನೂ ಮಹೇಶ್ ಬಾಬು ಮೂವರ ನಾಯಕಿಯರ ಜತೆ ಡ್ಯೂಯೇಟ್ ಹಾಡಲಿದ್ದಾರೆ. ಈಗಾಗಲೇ ತೆಲಗು ಚಿತ್ರರಂಗದಲ್ಲಿ ನಾಗಾರ್ಜುನ ಅಭಿನಯದ 'ಓಪರಿ ಚಿತ್ರ' ಹಾಗೂ ಪವನ್ ಕಲ್ಯಾಣ್ ಅಭಿನಯದ 'ಸರ್ದಾರ್ ಗಬ್ಬರ್ ಸಿಂಗ್' ಚಿತ್ರಗಳು ತೆಲಗು ಚಿತ್ರರಂಗದಲ್ಲಿ ಚರ್ಚೆ ಜೋರಾಗಿದೆ.

ಮಹೇಶ್ ಬಾಬು ಅಭಿನಯದ ಬ್ರಹ್ಮೋತ್ಸವಮ್ ಚಿತ್ರ ಸುದ್ದಿ ಮಾಡಲು ರೆಡಿಯಾಗಿದೆ. ಅದಕ್ಕಾಗಿ ಮಹೇಶ್ ಬಾಬು ಅಭಿಮಾನಿಗಳು ಕಾಯಲೇಬೇಕು.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ