ಕನ್ನಡ ಚಿತ್ರದಲ್ಲಿ ನಟಿಸುವ ಆಸೆಯಿದೆ ನಟಿ ಸಮಂತಾ

ಬುಧವಾರ, 17 ಆಗಸ್ಟ್ 2016 (10:55 IST)
ದಕ್ಷಿಣ ಭಾರತದ ಸಿನಿಮಾದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದ ನಟಿ ಸಮಂತಾ, ಇದೀಗ ಕನ್ನಡ ಚಿತ್ರದಲ್ಲಿಯೂ ನಟಿಸುವ ಇಚ್ಛೆ ವ್ಯಕ್ತಪಡಿಸಿದ್ದಾರೆ. 'ನನಗೆ ಕನ್ನಡ ಸಿನಿಮಾದಲ್ಲಿ ನಟಿಸುವಾಸೆ'. 'ಉತ್ತಮ ಅವಕಾಶಕ್ಕಾಗಿ ಎದುರು ನೋಡುತ್ತಿದ್ದೇನೆ 'ಟಾಲಿವುಡ್ ನಟಿ ಸಮಂತಾ ತಿಳಿಸಿದ್ದಾರೆ.

 
ಕೆಲಸದ ನಿಮಿತ್ಯ ಬೆಂಗಳೂರಿಗೆ ಬಂದಿದ್ದ ಅವರು, ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡುವ ಆಸೆ ವ್ಯಕ್ತಪಡಿಸಿದರು. ಈ ನಾಡಿನ ಅತ್ಯುತ್ತಮ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಹಿಂದಿ ಚಿತ್ರರಂಗದಲ್ಲಿಯೂ ಮಿಂಚುತ್ತಿದ್ದಾರೆ. ನನಗೂ ಕನ್ನಡದಲ್ಲೂ ನಟಿಸುವ ಆಸೆ ಇದೆ ಎಂದು ತಿಳಿಸಿದ್ದರು. 
 
ನನಗೆ ಸೂಕ್ತವೆನಿಸುವಂತಹ ಪಾತ್ರವನ್ನು ಎದುರು ನೋಡುತ್ತಿದ್ದೇನೆ, ಅಂತಹ ಪಾತ್ರಕ್ಕಾಗಿ ಕಾಯುತ್ತಿದ್ದೇನೆ, ಆದಷ್ಟು ಬೇಗ ನನ್ನಾಸೆ ನೆರವೇರಲಿ ಎಂದು ಆಶಿಸುತ್ತೇನೆ ಎಂದು ಸಮಂತಾ ರೂಟ್ ಪ್ರಭು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 
 
 
 

ವೆಬ್ದುನಿಯಾವನ್ನು ಓದಿ