ಬಿಜೆಪಿಗೆ ಪ್ರೀತಿ ಜಿಂಟಾ ಸೇರ್ಪಡೆ: ವದಂತಿಗೆ ಕೌಂಟರ್‌ ಕೊಟ್ಟ ಬಾಲಿವುಡ್ ನಟಿ

Sampriya

ಮಂಗಳವಾರ, 29 ಏಪ್ರಿಲ್ 2025 (17:11 IST)
Photo Credit X
ಬೆಂಗಳೂರು: ಪ್ರೀತಿ ಜಿಂಟಾ ಇತ್ತೀಚೆಗೆ ರಾಜಕೀಯಕ್ಕೆ ಪ್ರವೇಶಿಸುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹರಿದಾಡುತ್ತಿದೆ. ಈಚೆಗೆ ನಟಿ ದೇವಾಲಯಗಳಿಗೆ ಭೇಟಿ ನೀಡುತ್ತಿರುವುದು ಹಾಗೂ ಮಹಾಕುಂಭ ಮೇಳದಲ್ಲಿ ಭಾಗವಹಿಸಿದ್ದು, ಈ ಬೆಳವಣಿಗೆಗೆ ಕಾರಣವಾಗಿದೆ.

ಈ ಸಂಬಂಧ ಸಾಮಾಜಿಕ ಮಾಧ್ಯಮದಲ್ಲಿ ಅಭಿಮಾನಿಯೊಬ್ಬರ ಪ್ರಶ್ನೆಗೆ ಜಿಂಟಾ ಉತ್ತರಿಸಿದ್ದಾರೆ.

ಈಚೆಗೆ ಮಹಾ ಕುಂಭಮೇಳದಲ್ಲಿ ಜಿಂಟಾ ಪವಿತ್ರಾ ಸ್ನಾನ ಮಾಡಿದ್ದರು.  ಮಹಾಶಿವರಾತ್ರಿಯಂದು ವಾರಾಣಸಿಯ ಪ್ರಸಿದ್ಧ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದರು. ಈ ಬೆಳವಣಿಗೆಗೆ ನಡುವೆ ಪ್ರೀತಿ ಜಿಂಟಾ ರಾಜಕೀಯಕ್ಕೆ ಧುಮುಕಲಿದ್ದಾರೆ, ಬಿಜೆಪಿಗೆ ಸೇರಲಿದ್ದಾರೆ ಎಂಬ ವದಂತಿಗಳು ಹರಿದಾಡಿದ್ದವು.

ದೇವಸ್ಥಾನ ಅಥವಾ ಮಹಾ ಕುಂಭಕ್ಕೆ ಹೋಗಿ ಬಂದದ್ದು, ನಾನು ಭಾರತೀಯಳು  ಎಂಬುವುದರ ಬಗ್ಗೆ. ನಾನು ತಾಯ್ನಾಡಿನಿಂದ ದೂರವಿರುವ ಕಾರಣ ನನ್ನ ದೇಶಕ್ಕೆ ಬಂದ ವೇಳೆ ದೇವಸ್ಥಾನಗಳಿಗೆ ಭೇಟಿ ನೀಡುತ್ತೇನೆ. ಎಲ್ಲರ ಹಾಗೇ ಭಾರತ ಮತ್ತು ಮೌಲ್ಯಗಳನ್ನು ಹೆಚ್ಚು ಇಷ್ಟಪಡುತ್ತೇನೆ. ಇದರ ಅರ್ಥ ಬಿಜೆಪಿ ಸೇರುತ್ತೇನೆ ಎಂದಲ್ಲ ಎಂದು ಜಿಂಟಾ ತಿಳಿಸಿದ್ದಾರೆ.

ಈ ಪ್ರಶ್ನೆಯಿಂದ ನನಗೆ ಪಿಟಿಎಸ್‌ಡಿ ಇದೆ. ನಿಮ್ಮ ಸ್ಪಷ್ಟೀಕರಣವನ್ನು ಪ್ರಶಂಸಿಸಿ ಮತ್ತು ವಿದೇಶದಲ್ಲಿ ವಾಸಿಸಿದ ನಂತರ ನನ್ನ ಮಕ್ಕಳು ಅರ್ಧ ಭಾರತೀಯರು ಎಂಬುದನ್ನು ಮರೆಯುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ನಾನು ಬಯಸುತ್ತೇನೆ. ನನ್ನ ಪತಿ ಅಜ್ಞೇಯತಾವಾದಿಯಾಗಿರುವುದರಿಂದ ನಾವು ನಮ್ಮ ಮಕ್ಕಳನ್ನು ಹಿಂದೂಗಳಾಗಿ ಬೆಳೆಸುತ್ತಿದ್ದೇವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ