ಕೊಚ್ಚಿ (ಕೇರಳ): ಜನಪ್ರಿಯ ಮಲಯಾಳಂ ರಾಪರ್, ವೇದನ್ ಎಂದೇ ಖ್ಯಾತರಾಗಿರುವ ಹಿರಾಂದಾಸ್ ಮುರಳಿ ಅವರನ್ನು ಸೋಮವಾರ ಇಲ್ಲಿನ ತ್ರಿಪುಣಿತುರಾದ ವೈಟ್ಟಿಲ ಬಳಿಯ ಅಪಾರ್ಟ್‌ಮೆಂಟ್‌ನಿಂದ ವಶಪಡಿಸಿಕೊಳ್ಳಲಾಗಿದೆ.
ಸುಮಾರು ಆರು ಗ್ರಾಂ ಗಾಂಜಾ ವಶಪಡಿಸಿಕೊಂಡ ನಂತರ ಅವರನ್ನು ಈ ಸಂಬಂಧ ಅರೆಸ್ಟ್ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸರ್ಕಲ್ ಇನ್ಸ್‌ಪೆಕ್ಟರ್ ಎ.ಎಲ್.ಯೇಸುದಾಸ್ ಮಾತನಾಡಿ, ಫ್ಲಾಟ್‌ನಲ್ಲಿ ಗಾಂಜಾ ಪತ್ತೆಯಾಗಿದ್ದು, 9 ಲಕ್ಷ ರೂ.ಗಳು ಪತ್ತೆಯಾಗಿವೆ. ಈ ಹಣ ಕಾರ್ಯಕ್ರಮವೊಂದರ ಬುಕ್ಕಿಂಗ್ ಮೊತ್ತ ಎಂದು ವೇದನ್ ಹೇಳಿದ್ದಾರೆ. ಅದಲ್ಲದೆ ಚಿರತೆ ಹಲ್ಲು ಬಳಸಿರುವ ಬಗ್ಗೆ ಅರಣ್ಯ ಇಲಾಖೆಯೂ ವಿಚಾರಣೆ ಆರಂಭಿಸಿದೆ.
ವೇದನ್ ಡ್ರಗ್ಸ್ ಸೇವಿಸಿದ್ದನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ, ಅವರ ಫ್ಲಾಟ್‌ನಲ್ಲಿ ಒಟ್ಟು 9 ಜನರಿದ್ದರು.
ಹಿರಾಂದಾಸ್ ಮುರಳಿ ಅವರು ವೇದನ್ ಎಂದೇ ಖ್ಯಾತಿ ಗಳಿಸಿದ್ದಾರೆ. ಅವರು ಕೇರಳದ ಭಾರತೀಯ ರಾಪರ್ ಮತ್ತು ಗೀತರಚನೆಕಾರರಾಗಿದ್ದಾರೆ. 2020 ರ ಜೂನ್‌ನಲ್ಲಿ ಯೂಟ್ಯೂಬ್‌ನಲ್ಲಿ "ವಾಯ್ಸ್ ಆಫ್ ದಿ ವಾಯ್ಸ್‌ಲೆಸ್" ಎಂಬ ಶೀರ್ಷಿಕೆಯ ಮೊದಲ ಸಂಗೀತ ವೀಡಿಯೊವನ್ನು ಬಿಡುಗಡೆ ಮಾಡುವ ಮೂಲಕ ವೇದನ್ ಗಮನಸೆಳೆದರು.