ಕೆಟ್ಟ ಪತಿಯಿಂದ ಓಡಿ ಬಂದು ಸಾಹಸ ಮಹಿಳೆಯಾದೆ

ಗುರುವಾರ, 18 ಆಗಸ್ಟ್ 2016 (12:34 IST)
ಸ್ಟಂಟ್ ವುಮೇನ್ ಅಂತಲೇ ಖ್ಯಾತಿಯಾದ ಈಕೆ ತಮ್ಮ ಲೈಫಲ್ಲಿ ಆದ ಕಹಿ ಅನುಭವಗಳನ್ನು ಬಿಚ್ಚಿಟ್ಟಿದ್ದಾರೆ. ಜೀವನದಲ್ಲಿ ಎದುರಾದ ರಿಸ್ಕ್ ಗಳ ಬಗ್ಗೆ ಮಾತನಾಡಿರುವ ಅವರು, ಕೆಟ್ಟ ಪತಿಯಿಂದ ತಪ್ಪಿಸಿಕೊಂಡು ಸಾಹಸ ಮಹಿಳೆಯಾಗಿರುವುದರ ಕುರಿತು ಬಹಿರಂಗಪಡಿಸಿದ್ದಾರೆ. 


ಬಾಲಿವುಡ್‌ನಲ್ಲಿ ಸ್ಟಂಟ್ ವುಮೇನ್ ಅಂತಲೇ ಖ್ಯಾತಿ ಗಳಿಸಿರುವ ಗೀತಾ ಟಂಡನ್ ಸಾಹಸ ಮಹಿಳೆಯಾದುದರ ಕುರಿತು ನೆನಪಿಸಿಕೊಂಡಿದ್ದಾರೆ.
 
ಅವನು ನನ್ನನು ಯಾವಾಗಲು ಹೇಳುತ್ತಿದ್ದ, ನೀನು ನನ್ನನ್ನು ಬಿಟ್ಟರೆ, ಸ್ಕ್ರಿಪ್ಟ್ ಕ್ಲಬ್‌ಗಳಲ್ಲಿ ಡ್ಯಾನ್ಸ್ ಮಾಡು, ಸೆಕ್ಸ್ ಕೆಲಸಗಳಲ್ಲಿ ತೊಡಗಿಕೊಳ್ಳು ಎಂದು ಹೇಳುತ್ತಿದ್ದ. ಆದ್ರೆ ನಾನು ಅದನ್ನೆಲ್ಲಾ ಮಾಡಬಾರದು ಎಂದು ನಿರ್ಧರಿಸಿಕೊಂಡಿದ್ದೆ ಎಂದು ಗೀತಾ ಟಂಡನ್ ತಿಳಿಸಿದ್ದಾರೆ.
 
ಮುಂಬೈಗೆ ಬಂದು ಬದುಕಲು ಹೆಣಗಾಡುತ್ತಿದ್ದೆ, ಈ ವೇಳೆ ನನಗೆ ಮಹಿಳೆಯೊಬ್ಬರು ಬಂದು ನೀನು ಸಾಹಸಗಳನ್ನು ಮಾಡಬಲ್ಲೇ ಅಂತ ಹೇಳಿದ್ರು. ಅಂದು ನನಗೆ ಆಶ್ಚರ್ಯವಾಗಿತ್ತು. ಇಂಡಿಯನ್ ಸೀರಿಯಲ್‌ ಆಗಿದ್ದ 'ಶಂಕೀರಾ' ಎನ್ನುವ ಸಿರೀಯಲ್‌ನಲ್ಲಿ ಭಾಗಿಯಾಗಿದ್ದೆ, ಟ್ರೈನಿಂಗ್ ಇಲ್ಲದೇ ಸಾಹಸ ಕೆಲಸಗಳನ್ನು ಕೈಗೊಂಡೆ, ಅಲ್ಲಿಂದಲೇ ನನ್ನ ಸಾಹಸದ ಲೈಫ್ ಶುರುವಾಯ್ತು ಎಂದು ತಿಳಿಸಿದರು. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 

ವೆಬ್ದುನಿಯಾವನ್ನು ಓದಿ