ಆದ್ರೆ ಚಿತ್ರ ನಿರ್ಮಾಣ ಮಾಡುವುದು ಸ್ವಲ್ಪ ಕಷ್ಟಕರವಾದದ್ದು ಎಂದು ತಿಳಿಸಿದ ಅವರು, ನಟನಾಗುವುದು ಸುಲಭ, ಆದ್ರೆ ನಿರ್ಮಾಪಕ ಹಾಗೂ ನಿರ್ದೇಶಕನಾಗುವುದು ತುಂಬಾ ಕಷ್ಟದ ಕೆಲಸ ಎಂದು ತಿಳಿಸಿದರು.
ಮತ್ತೆ ಘಾಯಲ್ ಚಿತ್ರದ ನಿರ್ದೇಶನದ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಅವರು, ಡೈರೆಕ್ಷನ್ ಆ್ಯಕ್ಟಿಂಗ್‌ಗಿಂತಲೂ ತುಂಬಾ ಡಿಫಿಕಲ್ಟ್... ಆ್ಯಕ್ಟಿಂಗ್ ಮಾಡುವ ವೇಳೆ ನಿರ್ದೇಶಕ ಗೈಡ್ ಮಾಡ್ತಾನೆ ,ಆದ್ರೆ ನಿರ್ದೇಶನ ಮಾಡುವಾಗ ನೀವೇ ಸ್ವತವಾಗಿ ಕೆಲಸ ಮಾಡಬೇಕಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.