ಬೆಂಗಳೂರಿನ ಪಂಚತಾರಾ ಹೊಟೇಲ್‌ಗಳಲ್ಲಿ 'ಕಬಾಲಿ' ಪ್ರದರ್ಶನ

ಬುಧವಾರ, 20 ಜುಲೈ 2016 (16:20 IST)
ಕಬಾಲಿ ಫೀವರ್ ಎಲ್ಲೆಲ್ಲೂ ಜೋರಾಗಿ ಕೇಳಿಬರುತ್ತಿದೆ. ಬಹುದಿನಗಳಿಂದ 'ಕಬಾಲಿ' ಚಿತ್ರದ ರಿಲೀಸ್‌ಗಾಗಿ ಕಾಯುತ್ತಿದ್ದ ಅಭಿಮಾನಿಗಳು ಚಿತ್ರ ಬಿಡುಗಡೆಯಾಗುತ್ತಿರುವುದಕ್ಕೆ ಫುಲ್ ಖುಷ್ ಮೂಡನಲ್ಲಿದ್ದಾರೆ. ರಜನಿ ಅಭಿಮಾನಿಗಳಿಗೊಂದು ಮತ್ತೊಂದು ಸಿಹಿ ಸುದ್ದಿ ಕಾದಿದೆ. ಇದೀಗ ಕಬಾಲಿ ಚಿತ್ರ ಕೇವಲ ಚಿತ್ರಮಂದಿರಗಳಲ್ಲಿ ಮಾತ್ರ ರಿಲೀಸ್ ಆಗುತ್ತಿಲ್ಲ. ಬೆಂಗಳೂರಿನ ಪಂಚತಾರಾ ಹೊಟೇಲ್‌ಗಳಲ್ಲಿ  ಚಿತ್ರದ ಪ್ರದರ್ಶನಕ್ಕಾಗಿ ಆಯೋಜನೆ ಮಾಡಲಾಗುತ್ತಿದೆ. 

 
ಐಟಿ ಸಿಟಿಯಲ್ಲಿ' ಕಬಾಲಿ' ಚಿತ್ರವನ್ನು ನೋಡಲು ಜನರು ಕುತೂಹಲದಿಂದ ಕಾಯುತ್ತಿದ್ದಾರೆ. ಮೊದಲ ಬಾರಿಗೆ ಐಟಿ ಸಿಟಿ ಬೆಂಗಳೂರಿನಲ್ಲಿ ಹೊಟೇಲ್‌ಗಳಲ್ಲಿ ಚಿತ್ರದ ಪ್ರದರ್ಶನ ಆಯೋಜನೆ ಮಾಡಲಾಗುತ್ತಿರುವುದು ವಿಶೇಷ..
 
ಪಂಚಾತಾರಾ ಹೊಟೇಲ್‌ಗೆ ಹೋಗಿ ನೀವೂ ಸಿನಿಮಾ ನೋಡಬೇಕಾದರೆ ಪ್ರತಿ ಟಿಕೆಟ್ ಬೆಲೆ 1300ರೂ. ದರ ನಿಗದಿಪಡಿಸಲಾಗಿದೆ. ರಜನಿ ಫ್ಯಾನ್ಸ್‌ಗಳು ಇಲ್ಲಿಯೂ ಕೂಡ ಟಿಕೆಟ್‌ಗಾಗಿ ಬುಕ್ ಮಾಡಬಹುದು. 
 
ಆದ್ರೆ ಕರ್ನಾಟಕದ ಸಿನಿಮಾ ಚೇಂಬರ್ ಇದಕ್ಕೆ ವಿರೋಧ ವ್ಯಕ್ತಪಡಿಸಿದೆ. ಚೇಂಬರ್ ಪ್ರಕಾರ ಚಿತ್ರ ಪ್ರದರ್ಶನಕ್ಕೆ ಚಿತ್ರಮಂದಿರಗಳಿಗೆ ಮಾತ್ರ ಲೈಸನ್ಸ್ ನೀಡಲಾಗಿದ್ದು, ಅನುಮತಿ ನೀಡಿದ್ರೆ ಸ್ಯಾಂಡಲ್‌ವುಡ್ ಇಂಡಸ್ಟ್ರಿ ಮೇಲೆ ಪರಿಣಾಮ ಬೀರಲಿದೆ ಎನ್ನಲಾಗುತ್ತಿದೆ. 
 
ಆದ್ರೆ ಪಂಚಾತಾರಾ ಹೊಟೇಲ್‌ಗಳು ಹೇಳುವುದು ಬೇರೆ.. ಇದೊಂದು ನೂತನ ಪ್ರಯೋಗಕ್ಕೆ ಮುಂದಾಗಿದ್ದು, ಎಲ್ಲಾ ಸಮಯದಲ್ಲಿ ಬಿಗ್ ಬ್ಯಾನರ್ ಚಿತ್ರಗಳು ರಿಲೀಸ್ ಆದ ವೇಳೆಯಲ್ಲಿ ಬಾಲ್ ರೂಮ್‌ಗಳನ್ನು ಸಿನಿಮಾ ಹಾಲ್‌ಗಳನ್ನಾಗಿ ಪರಿವರ್ತಿಸಲಾಗುವುದಿಲ್ಲ ಎಂದು ಮನವರಿಕೆ ಮಾಡಿವೆಯಂತೆ.
 
ಇನ್ನೂ ಸರ್ಕಾರದ ನಿಯಮದ ಪ್ರಕಾರ ಖಾಸಗಿ ಸ್ಕ್ರೀನಿಂಗ್‌ಗಳಾದ ಹೊಟೇಲ್‌ ಸ್ಥಳಗಳನ್ನು ಚಿತ್ರಮಂದಿರಗಳನ್ನಾಗಿ ಪರಿವರ್ತನೆ ಮಾಡೋಹಾಗಿಲ್ಲ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ