ನವದೆಹಲಿ: ಬಿಗ್ ಬಾಸ್ OTT 2021 ರ ರಿಯಾಲಿಟಿ ಶೋನಲ್ಲಿ ರಾಕೇಶ್ ಬಾಪಟ್ ಜತೆಗಿನ ಶಮಿತಾ ಶೆಟ್ಟಿ ಪ್ರೀತಿ ಹೆಚ್ಚು ದಿನ ಉಳಿಯಲಿಲ್ಲ. ಹೊರಗಡೆ ಬಂದ್ಮೇಲೆ ಈ ಜೋಡಿ ಬ್ರೇಕಪ್ ಮಾಡಿಕೊಂಡರು. ಈಚೆಗೆ ಸಂದರ್ಶನವೊಂದರಲ್ಲಿ ತಮ್ಮ ಬ್ರೇಕಪ್‌ವಿಚಾರದ ಬಗ್ಗೆ ನಟಿ ಶಮಿತಾ ಮುಕ್ತವಾಗಿ ಮಾತನಾಡಿದ್ದಾರೆ.
ಪಿಂಕ್ವಿಲ್ಲಾ ಜೊತೆಗಿನ ಸಂದರ್ಶನದಲ್ಲಿ, ಶಮಿತಾ ಇದನ್ನು ತನ್ನ ಜೀವನದಲ್ಲಿ "ಅಳಿಸಿಹೋದ ಅಧ್ಯಾಯ" ಎಂದು ಕರೆದರು. ಶ
ಮಿತಾ ಅವರು ರಾಕೇಶ್‌ನನ್ನು ಏಕೆ ಪ್ರೀತಿಸುತ್ತಿದ್ದರು ಮತ್ತು ಅಂತಿಮವಾಗಿ ಸಂಬಂಧ ಏಕೆ ಮುರಿದುಬಿತ್ತು ಎಂಬುದನ್ನು ವಿವರಿಸಿದರು.
"ದಯವಿಟ್ಟು ಅರ್ಥಮಾಡಿಕೊಳ್ಳಿ, ನೀವು ಇಷ್ಟು ದಿನ ಮನೆಯೊಳಗೆ ಲಾಕ್ ಆಗಿರುವಾಗ, ನೀವು ಅಂತಹ ಸಂಬಂಧಗಳನ್ನು ಬೆಳೆಸಿಕೊಳ್ಳುವುದು ಸಹಜ ಎಂದು ನಾನು ಭಾವಿಸುತ್ತೇನೆ. ಏಕೆಂದರೆ ನೀವು ಬೆಂಬಲಕ್ಕಾಗಿ ನೋಡುತ್ತೀರಿ. ನಿಮ್ಮ ದುರ್ಬಲ ಕ್ಷಣಗಳಲ್ಲಿ, ನೀವು ಆ ನಿಕಟತೆಯನ್ನು ಹುಡುಕುತ್ತೀರಿ, ಅದು ತುಂಬಾ ಸಹಜ" ಎಂದು ಶಮಿತಾ ಹೇಳಿದರು.
"ಆದಾಗ್ಯೂ, ನಾವಿಬ್ಬರೂ ಸಂಪೂರ್ಣವಾಗಿ ವಿಭಿನ್ನ ವ್ಯಕ್ತಿಗಳಾಗಿರುವುದರಿಂದ ಹೊರಗಿನ ಪ್ರಪಂಚದಲ್ಲಿ ಇದು ಸಂಭವಿಸುತ್ತಿರಲಿಲ್ಲ. ಇದು ನನ್ನ ಜೀವನದಲ್ಲಿ ಅಳಿಸಿಹೋಗಿರುವ ಅಧ್ಯಾಯವಾಗಿದೆ" ಎಂದು ಅವರು ಸೇರಿಸಿದರು.
ಸಮಯ ಕಳೆದಂತೆ, ಶಮಿತಾ ಎಲ್ಲಕ್ಕಿಂತ ತನ್ನ ಶಾಂತಿಗೆ ಆದ್ಯತೆ ಹೆಚ್ಚು ಎಂದರು.