ಮಗನ ಬಗ್ಗೆ ಅಪಪ್ರಚಾರ ಮಾಡಬೇಡಿ ಎಂದು ಜಗ್ಗೇಶ್ ಮನವಿ ಮಾಡಿದ್ಯಾಕೆ?
ಶುಕ್ರವಾರ, 20 ಜುಲೈ 2018 (07:06 IST)
ಬೆಂಗಳೂರು : ಕನ್ನಡದ ಚಿತ್ರರಂಗದ ಖ್ಯಾತ ನಟ ನವರಸನಾಯಕ ಜಗ್ಗೇಶ್ ಅವರು ತಮ್ಮ ಮಗನ ಬಗ್ಗೆ ಅಪಪ್ರಚಾರ ಮಾಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಅವರು ಈ ರೀತಿ ಮನವಿ ಮಾಡಲು ಒಂದು ಕಾರಣವಿದೆ. ಅದೇನೆಂದರೆ ಕೆ.ಶಿವಕುಮಾರ್ ನಿರ್ಮಾಣದಲ್ಲಿ ಮೂಡಿಬರುತ್ತಿರುವ ರಾಜು ದೇವಸಂದ್ರ ನಿರ್ದೇಶನ ಮಾಡುತ್ತಿರುವ "ಗೋಸಿ ಗ್ಯಾಂಗ್” ಎಂಬ ಚಿತ್ರದಲ್ಲಿ ಜಗ್ಗೇಶ್ ಅವರ ಎರಡನೇ ಮಗ ಯತಿರಾಜ್ ಅವರು ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಅವರು ಡ್ರಗ್ ಮಾಫಿಯಾದ ಪಾತ್ರ ನಿರ್ವಹಿಸುತ್ತಿದ್ದಾರೆ.
ಆದರೆ ಈ ಬಗ್ಗೆ ಸುದ್ದಿ ಪ್ರಕಟವಾಗುವಾಗ ಅದಕ್ಕೆ ನೀಡಿದ್ದ ಟೈಟಲ್ ಬಗ್ಗೆ ಬೇಸರಗೊಂಡ ನಟ ಜಗ್ಗೇಶ್ ಅವರು ಈ ಬಗ್ಗೆ ಜನರಲ್ಲಿ ಮನವಿಯೊಂದನ್ನು ಮಾಡಿದ್ದಾರೆ. ‘ಯತಿರಾಜ್ ನಟಿಸಿರುವುದು 'ಗೋಸಿ ಗ್ಯಾಂಗ್' ಚಿತ್ರದ ಕಥೆ. ಈ ಚಿತ್ರದ ಪ್ರಚಾರಕ್ಕೆ ಇಂಥ ಶೀರ್ಷಿಕೆ ಅಷ್ಟೆ. ಕೆಲವೊಮ್ಮೆ ಪ್ರಚಾರ ಅಪಪ್ರಚಾರಕ್ಕೆ ದಾರಿಯಾಗುತ್ತೆ. ಕೆಲವರಿಗೆ ಈ ರೀತಿಯ ವಿಷಯ ಅರಿವುದಕ್ಕೆ ಸ್ವಲ್ಪ ತಾಳ್ಮೆ ಕಮ್ಮಿ. ಪ್ರಚಾರ ಅಪಪ್ರಚಾರವಾಗೋದು ಬೇಡ’ವೆಂದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ