ಗಂಡಸರಿಗೆ ತಿನ್ನುವ ಬಯಕೆಗಿಂತ ಸೆಕ್ಸ್ ಮಾಡುವ ಬಯಕೆಯೇ ಜಾಸ್ತಿ ಯಾಕೆ ಗೊತ್ತಾ….?
ಶುಕ್ರವಾರ, 20 ಜುಲೈ 2018 (06:59 IST)
ಬೆಂಗಳೂರು : ಉತ್ತಮ ಆಹಾರದ ಮೂಲಕ ಪುರುಷರ ಮನಸ್ಸನ್ನು ಗೆಲ್ಲಬಹುದೆಂದು ಹೇಳುತ್ತಾರೆ. ಆದರೆ ಹೊಸ ಸಂಶೋಧನೆಯೊಂದರ ಪ್ರಕಾರ ಸೆಕ್ಸ್ ಹಾಗೂ ಆಹಾರ ನಡುವಿನ ವಿಚಾರದಲ್ಲಿ ಪುರುಷರ ಮೊದಲ ಆದ್ಯತೆ ಸೆಕ್ಸ್ ಗೇ ನೀಡುತ್ತಾರೆ ಎಂಬುದಾಗಿ ತಿಳಿದುಬಂದಿದೆ.
ಇದಕ್ಕೆ ಕಾರಣ ಪುರುಷರ ಮೆದುಳು ರಚನೆಗೊಂಡಿರುವ ರೀತಿ. ಪುರುಷರ ಮೆದುಳಿನಲ್ಲಿರುವ ನಿರ್ದಿಷ್ಟ ನರಕೋಶಗಳು ತಿನ್ನುವ ಬಯಕೆಗಿಂತ ಲೈಂಗಿಕ ಬಯಕೆ ಹೆಚ್ಚಾಗುವಂತೆ ಮಾಡುತ್ತವೆ. ಆದರೆ ಮಹಿಳೆಯರ ಮೆದುಳಿನಲ್ಲಿರುವ ನರಕೋಶಗಳು ಆಹಾರಕ್ಕೆ ಹೆಚ್ಚು ಆದ್ಯತೆ ನೀಡುವಂತೆ ಮಾಡುತ್ತವೆ ಎಂದು ಯೂನಿವರ್ಸಿಟಿ ಕಾಲೇಜ್ ಲಂಡನ್ ನ ವಿಜ್ಞಾನಿಗಳು ಹೇಳಿದ್ದಾರೆ. ಈ ಅಧ್ಯಯನ ವರದಿಯಿಂದ ಮಹಿಳೆಯರ ಮೆದುಳಿನಲ್ಲಿ ಇಲ್ಲದ ನರಕೋಶಗಳು ಪುರುಷರ ಮೆದುಳಿನಲ್ಲಿರುತ್ತವೆ ಎಂಬುದು ಸ್ಪಷ್ಟವಾಗಿದೆ. ಹಾಗೇ ಪುರುಷರ ಮೆದುಳಿನಲ್ಲಿರುವ ವಿಭಿನ್ನ ನರಕೋಷಗಳಿಗೆ "ಪುರುಷ ರಹಸ್ಯ ಜೀವಕೋಶ" ಎಂದು ಹೇಳಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ