1000 ಕೋಟಿ ಗಳಿಸಿದ ‘ಜವಾನ್’

ಗುರುವಾರ, 28 ಸೆಪ್ಟಂಬರ್ 2023 (16:44 IST)
ಆಟ್ಲಿ ನಿರ್ದೇಶನದ, ನಟ ಶಾರುಕ್ ಖಾನ್ ಮುಖ್ಯ ಪಾತ್ರದಲ್ಲಿರುವ ಜವಾನ್ ಚಿತ್ರ ಸೆ.7 ರಂದು ಜಗತ್ತಿನಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಸಿನಿ ಪ್ರಿಯರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ಇದೀಗ ಈ ಚಿತ್ರ ಬಿಡುಗಡೆಯಾಗಿ ಕೆಲವೇ ದಿನಗಳಲ್ಲಿ 1,000 ಕೋಟಿ ಕ್ಲಬ್​ಗೆ ಸೇರಿದೆ. 20 ದಿನದಲ್ಲಿ ಜವಾನ್ ಚಿತ್ರ 1,000 ಕೋಟಿ ಜಾಗತಿಕವಾಗಿ ಬಾಕ್ಸ್ ಆಫೀಸ್ ಗಳಿಕೆ ಕಂಡಿದೆ. ಈ ಹಿನ್ನೆಲೆ ಜವಾನ್ ಚಿತ್ರತಂಡ ಪ್ರೇಕ್ಷಕರಿಗೆ ಧನ್ಯವಾದಗಳನ್ನು ತಿಳಿಸಿದೆ. ಈ ಚಿತ್ರ ಒಟಿಟಿ ನೆಟ್​​ಫ್ಲಿಕ್ಸ್​​ನಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ. ಈ ಮೂಲಕ ಹಿಂದಿ ಚಿತ್ರರಂಗದ ಇತಿಹಾಸದಲ್ಲಿ ಶಾರುಖ್ ಚಿತ್ರ ಹೊಸ ದಾಖಲೆ ಬರೆದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ