ಅಮೀರ್ ಖಾನ್ ಗೆ ಮಗಳ ಮದುವೆ ಸಂಭ್ರಮ

ಗುರುವಾರ, 14 ಸೆಪ್ಟಂಬರ್ 2023 (16:28 IST)
Photo Courtesy: Twitter
ಮುಂಬೈ: ಬಾಲಿವುಡ್ ನಟ ಅಮೀರ್ ಖಾನ್ ಪುತ್ರಿ ಇರಾ ಖಾನ್ ಬಹುಕಾಲದ ಗೆಳೆಯ ನೂಪುರ್ ಶಿಖಾರೆ ಜೊತೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ.

ಅಕ್ಟೋಬರ್ 3 ರಂದು ಇಶಾ ಮತ್ತು ನೂಪುರ್ ರಿಜಿಸ್ಟರ್ ವಿವಾಹವಾಗಲಿದ್ದಾರೆ. ನಂತರ ಉದಯಪುರದಲ್ಲಿ ಅದ್ಧೂರಿಯಾಗಿ ಮದುವೆ ನಡೆಯಲಿದೆ. ಈ ಕಾರ್ಯಕ್ರಮ ಮೂರು ದಿನಗಳವರೆಗೆ ನಡೆಯಲಿದೆ.

ಹಲವು ಸಮಯದಿಂದ ಇಶಾ ಮತ್ತು ನೂಪುರ್ ಪರಸ್ಪರ ಪ್ರೀತಿಸುತ್ತಿದ್ದು, ಲಿವ್ ಇನ್ ರಿಲೇಷನ್ ಶಿಪ್ ನಲ್ಲಿದ್ದರು. ಇದೀಗ ಮದುವೆಯಾಗಲು ತೀರ್ಮಾನಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ