ಭಾರತದಲ್ಲಿ 120 ಕೋಟಿ ರೂ. ದಾಟಿದ ಜವಾನ್ ಚಿತ್ರದ ಕಲೆಕ್ಷನ್

ಭಾನುವಾರ, 10 ಸೆಪ್ಟಂಬರ್ 2023 (14:20 IST)
ಶಾರುಖಾನ್ ನಟನೆಯ ಜವಾನ್ ಸಿನಿಮಾ ಎರಡನೇ ದಿನ ಕೂಡ ಬಾಕ್ಸ್ ಆಫೀಸ್ನಲ್ಲಿ  ಸುನಾಮಿ ಎಬ್ಬಿಸಿದೆ. 2ನೇ ದಿನ 50ರಿಂದ 53 ಕೋಟಿ ರೂಪಾಯಿ ಆದಾಯ ಹರಿದು ಬಂದಿದೆ ಎಂದು ವರದಿಯಾಗಿದೆ. ಅಂದರೆ, ಎರಡೇ ದಿನಕ್ಕೆ ‘ಜವಾನ್’ ಸಿನಿಮಾದ ಕಲೆಕ್ಷನ್ 120 ಕೋಟಿ ರೂಪಾಯಿ ದಾಟಿದಂತಾಗುತ್ತದೆ. ವಿದೇಶಿ ಕಲೆಕ್ಷನ್ ಸೇರಿಸಿದರೆ ಈ ಮೊತ್ತ ಇನ್ನೂ ದೊಡ್ಡದಾಗಲಿದೆ. ಈ ಗೆಲುವಿನಿಂದ ಶಾರುಖ್ ಖಾನ್ ಅವರ ಮುಖದಲ್ಲಿ ನಗು ಅರಳಿದೆ. ಇಷ್ಟು ದಿನಗಳ ಕಾಲ ಬಾಲಿವುಡ್ ಬಾಕ್ಸ್ ಆಫೀಸ್ನಲ್ಲಿ ‘ಗದರ್ 2’ ಸಿನಿಮಾ ಸದ್ದು ಮಾಡುತ್ತಿತ್ತು. ಆ ಸಿನಿಮಾ 300 ಕೋಟಿ ರೂಪಾಯಿಗಿಂತಲೂ ಹೆಚ್ಚು ಕಲೆಕ್ಷನ್ ಮಾಡಿದೆ. ಈಗ ‘ಜವಾನ್’ ಸಿನಿಮಾ ಕಮಾಲ್ ಮಾಡುತ್ತಿದ್ದು, ಮೊದಲ ಎರಡು ದಿನಗಳ ಕಾಲ ಅನೇಕ ಚಿತ್ರಮಂದಿರಗಳಲ್ಲಿ ಈ ಸಿನಿಮಾ ಹೌಸ್ಫುಲ್ ಪ್ರದರ್ಶನ ಕಂಡಿದೆ. ಆ್ಯಕ್ಷನ್ ಪ್ರಿಯರಂತು ಈ ಸಿನಿಮಾವನ್ನು ಸಖತ್ ಇಷ್ಟಪಟ್ಟಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ