ಬೂಟ್ ವಿಚಾರಕ್ಕೆ ಟ್ರೋಲ್ ಆದ ನಟಿ ಜಾಹ್ನವಿ ಕಪೂರ್

ಮಂಗಳವಾರ, 2 ಅಕ್ಟೋಬರ್ 2018 (11:23 IST)
ಮುಂಬೈ : ಹೆಚ್ಚಾಗಿ  ಡ್ರೆಸ್ ವಿಚಾರಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಆಗುತ್ತಿದ್ದ ಬಾಲಿವುಡ್ ನಟಿ ಜಾಹ್ನವಿ ಕಪೂರ್ ಇದೀಗ  ಬೂಟ್ ವಿಚಾರಕ್ಕೆ ಟ್ರೋಲ್ ಆಗಿದ್ದಾರೆ.


ಹೌದು. ನಟಿ ಜಾಹ್ನವಿ ಕಪೂರ್ ಇತ್ತೀಚೆಗೆ ಅನಿಲ್ ಅಂಬಾನಿ ಮಗಳು ಇಶಾ ನಿಶ್ಚಿತಾರ್ಥ ಕಾರ್ಯಕ್ರಮ ಮುಗಿಸಿ ಭಾರತಕ್ಕೆ ವಾಪಸ್ ಆಗಿದ್ದಾಳೆ. ಆಗ ವಿಮಾನ ನಿಲ್ದಾಣದಲ್ಲಿ ತನ್ನ ಸಹೋದರಿ ಜೊತೆ ಕ್ಯಾಮರಾ ಕಣ್ಣಿಗೆ ಸೆರೆಯಾಗಿದ್ದಾಳೆ. ಆ ವೇಳೆ ನಟಿ ಜಾಹ್ನವಿ ಡೆನಿಮ್ ಮತ್ತು ಪರ್ಪಲ್ ಟಾಪ್ ಧರಿಸಿದ್ದಳು. ಜೊತೆಗೆ ಬಣ್ಣದ ಬೂಟ್ ಧರಿಸಿದ್ದಳು. ಗುಸ್ಸಿ ಬ್ರ್ಯಾಂಡ್ ನ ಈ ಬೂಟ್ ಬೆಲೆ 1.2 ಲಕ್ಷ ರೂಪಾಯಿ.


ಈ ಫೋಟೋ ಟ್ರೋಲರ್ ಗಳ ಬಾಯಿಗೆ ಆಹಾರವಾಗಿದೆ. ಸಾಮಾಜಿಕ ಜಾಲತಾಣ ಬಳಕೆದಾರರಿಗೆ ಜಾಹ್ನವಿ ಶೂ ಇಷ್ಟವಾಗಲಿಲ್ಲ. ಕೊಳಕು ಹಾಗೂ ಕೆಟ್ಟ ಫ್ಯಾಷನ್ ಎಂದು ಅನೇಕರು ಜಾಹ್ನವಿಗೆ ಕಮೆಂಟ್ ಮಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ