ರಘು ದೀಕ್ಷಿತ್ ಮೂಲತಃ ಮೈಸೂರಿನವರು. ಈ ಹಿಂದೆ ನೃತ್ಯಗಾತಿ ಮಯೂರಿ ಅವರನ್ನು ವಿವಾಹವಾಗಿದ್ದರು. ಬಳಿಕ ಇಬ್ಬರ ನಡುವೆ ಹೊಂದಾಣಿಕೆ ಸಮಸ್ಯೆಯಿಂದ 2019 ರಲ್ಲಿ ಪರಸ್ಪರ ವಿಚ್ಛೇದನ ಪಡೆದುಕೊಂಡರು. ಅದಾದ ಬಳಿಕ ಅವರು ಒಂಟಿಯಾಗಿಯೇ ಇದ್ದರು.
ಇದೀಗ ಮತ್ತೊಮ್ಮೆ ಜಂಟಿಯಾಗಲು ತೀರ್ಮಾನಿಸಿದ್ದಾರೆ. ಖ್ಯಾತ ಗಾಯಕಿ, ಕೊಳಲು ವಾದಕಿ ವಾರಿಜಶ್ರೀ ವೇಣುಗೋಪಾಲ್ ಜೊತೆ ರಘು ದೀಕ್ಷಿತ್ ಹಸೆಮಣೆ ಏರಲಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ. ಗ್ರಾಮೀ ನಾಮಿನೇಟೆಡ್ ಹಾಡುಗಾತಿ ವಾರಿಜಾಶ್ರೀ ಕೂಡಾ ಮೂಲತಃ ಮೈಸೂರಿನವರೇ.
ರಘು ದೀಕ್ಷಿತ್ ಗೆ ಈಗ 50 ವರ್ಷ. ಇತ್ತ ವಾರಿಜಾಶ್ರೀಗೆ 34 ವರ್ಷ. ಇಬ್ಬರ ನಡುವೆ ಬರೋಬ್ಬರಿ 16 ವರ್ಷ ವಯಸ್ಸಿನ ಅಂತರವಿದೆ ಎಂದು ಹೇಳಲಾಗುತ್ತಿದೆ. ಆದರೇನಂತೆ ಮದುವೆಗೆ ಮನಸ್ಸು, ಪ್ರೀತಿ ಮುಖ್ಯ ಎಂದು ಇಬ್ಬರೂ ಸಪ್ತಪದಿ ತುಳಿಯಲು ಸಿದ್ಧರಾಗಿದ್ದಾರೆ. ಮೂಲಗಳ ಪ್ರಕಾರ ಇದೇ ತಿಂಗಳು ಇಬ್ಬರ ಮದುವೆ ನಡೆಯಲಿದೆ.